ಸುವರ್ಣ ನ್ಯೂಸ್ ಪ್ರಶ್ನೆಗೆ ಜಮೀರ್ ವಿಲ-ವಿಲ: ಮೈಕ್‌ ಕಂಡು ಓಡಿದ ದೃಶ್ಯ ನೋಡಿ..!

ಪಾದರಾಯನಪುರಕ್ಕೆ ಜಮೀರ್ ಪರ್ಮಿಷನ್ ಇಲ್ಲದೇ ಯಾರೂ ಬರಬಾರದ? ಇವರ ಅಪ್ಪಣೆ ಪಡೆದು ಪಾದರಾಯನಪುರಕ್ಕೆ ಹೋಗ್ಬೇಕೇ? ಅಂತೆಲ್ಲಾ ಸುವರ್ಣ ನ್ಯೂಸ್ ಪ್ರಶ್ನೆಗೆ ಕಂಗಾಲಾದ ಜಮೀರಣ್ಣಗೆ ಏನು ತೋಚದೇ ದಿಕ್ಕಪಾಲಾಗಿ ಪಲಾಯನ ಮಾಡಿರುವ ದೃಶ್ಯವನ್ನು ನೋಡಿ...!

Share this Video
  • FB
  • Linkdin
  • Whatsapp

ಬೆಂಗಳೂರು, (ಏ.20): ಕೊರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಬೆಂಗಳೂರಿನ ಸಾಧಿಕ್ ನಗರದಲ್ಲಿ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾಗಲೂ ಇದೇ ಜಮೀರ್ ಅಹ್ಮದ್ ಅವರು ಹೇಳಿ ಬರಬೇಕು. ಅವರು ಬರುತ್ತಾರೆ ಅಂತ ನಮಗೆ ಯಾರು ಹೇಳಿಲ್ಲ ಎಂದು ಪುಂಡರ ಪರ ಬ್ಯಾಟಿಂಗ್ ಮಾಡಿದ್ದರೂ.

ಪಾದರಾಯನಪುರ ಪುಂಡರ ಸುದ್ದಿ

ಇದೀಗ ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಪಾದರಾಯನಪುರಕ್ಕೆ ಹೋದ್ರು? ಬೆಳಗ್ಗೆ ಬರಬೇಕಿತ್ತು ಅಂತೆಲ್ಲಾ ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಯೋಗ್ಯತೆ ಏನು ಎನ್ನುವುದನ್ನು ತೋರಿಸಿದ್ದಾರೆ.

ಅಂದಹಾಗೆ ಪಾದರಾಯನಪುರಕ್ಕೆ ಜಮೀರ್ ಪರ್ಮಿಷನ್ ಇಲ್ಲದೇ ಯಾರೂ ಬರಬಾರದ? ಇವರ ಅಪ್ಪಣೆ ಪಡೆದು ಪಾದರಾಯನಪುರಕ್ಕೆ ಹೋಗ್ಬೇಕೇ? ಅಂತೆಲ್ಲಾ ಸುವರ್ಣ ನ್ಯೂಸ್ ಪ್ರಶ್ನೆಗೆ ಕಂಗಾಲಾದ ಜಮೀರಣ್ಣಗೆ ಏನು ತೋಚದೇ ದಿಕ್ಕಪಾಲಾಗಿ ಪಲಾಯನ ಮಾಡಿರುವ ದೃಶ್ಯವನ್ನು ನೋಡಿ...!

Related Video