Hijab Row : ಕರ್ನಾಟಕದ ವಿವಾದ ತಮಿಳುನಾಡಿಗೆ ಬರಬಾರದು ಎಂದ ಕಮಲ್ ಹಾಸನ್
ಹಿಜಾಬ್ ವಿವಾದದ ಬಗ್ಗೆ ಕಮಲ್ ಹಾಸನ್ ಟ್ವೀಟ್
ಹಿಜಾಬ್ ಕರ್ನಾಟಕದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದೆ
ಕರ್ನಾಟಕದ ವಿವಾದ ತಮಿಳುನಾಡಿಗೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಟ್ವೀಟ್
ಬೆಂಗಳೂರು (ಫೆ.9): ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಬಹುಭಾಷಾ ನಟ ಕಮಲ್ ಹಾಸನ್ (Actor Kamal Haasan) ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಜಾಬ್ ವಿವಾದ ಕರ್ನಾಟಕದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷಗೋಡೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
Hijab Row ಹಿಜಾಬ್ ವಿವಾದ, ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ
ಕರ್ನಾಟಕದಲ್ಲಿ ತಲೆದೋರಿರುವ ಈ ವಿವಾದ ತಮಿಳುನಾಡಿಗೆ (Tamil Nadu) ಬರಬಾರದು. ಪ್ರಗತಿಪರಶಕ್ತಿಗಳು ಈಗ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯದ ಹಿಜಾಬ್ ವಿವಾದದ ಬಗ್ಗೆ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ವಿಸ್ತ್ರತ ಪೀಠಕ್ಕೆ ಕಳುಹಿಸುವ ತೀರ್ಮಾನ ಮಾಡಲಾಗಿದೆ. ಮಧ್ಯಂತರ ಆದೇಶದ ಬಗ್ಗೆ ವಿಸ್ತ್ರತ ಪೀಠವೇ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದೆ.