Omicron variant: ಹೊಸವರ್ಷ, ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಓಮಿಕ್ರಾನ್ ಬ್ರೇಕ್..? ಸಿಎಂ ಮಹತ್ವದ ಸಭೆ

ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ‘ಒಮಿಕ್ರೋನ್‌’  (Omicron variant) ತಳಿಯ ಕೊರೋನಾ ಸೋಂಕಿನ ಬಗ್ಗೆ ರಾಜ್ಯದಲ್ಲೂ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ.

First Published Nov 28, 2021, 2:56 PM IST | Last Updated Nov 28, 2021, 2:59 PM IST

ಬೆಂಗಳೂರು (ನ. 28): ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ‘ಒಮಿಕ್ರೋನ್‌’ ತಳಿಯ (Omicron variant)  ಕೊರೋನಾ ಸೋಂಕಿನ ಬಗ್ಗೆ ರಾಜ್ಯದಲ್ಲೂ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavara Bommai) ನೇತೃತ್ವದಲ್ಲಿ ಶನಿವಾರ ಮಹತ್ವದ ಸಭೆ ನಡೆದಿದ್ದು, ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ.

Omicron Variant: ಭಾರತದಲ್ಲಿ ತಲ್ಲಣ, ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಲು ಮೋದಿ ಸೂಚನೆ

ಹೊಸ ವರ್ಷದ ಸಂಭ್ರಮಾಚರಣೆ, ಕ್ರಿಸ್‌ಮಸ್ ಸಂಭ್ರಮಾಚರಣೆಗೂ ಓಮಿಕ್ರಾನ್ ಕರಿನೆರಳು ಬಿದ್ದಿದೆ. ಈ ಬಗ್ಗೆ ಮುಂದಿನ ವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಲಾಕ್‌ಡೌನ್, ಕಠಿಣ ನಿಯಮ ಜಾರಿ ಬಗ್ಗೆ ನಾಳೆ ಡಾ. ಸುಧಾಕರ್ ಸಭೆ ನಡೆಸಲಿದ್ದಾರೆ.