ಹಳೇ ಹುಬ್ಬಳ್ಳಿ ಗಲಭೆ ಕೇಸ್, ಎಐಎಂಐಎಂನ ಕಾರ್ಪೋರೇಟರ್ ಬಂಧನ!

ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಎಐಎಂಐಎಂನ ನಜೀರ್ ಅಹ್ಮದ್ ಎಂ ಹೊನ್ಯಾಳ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

First Published Apr 23, 2022, 6:46 PM IST | Last Updated Apr 23, 2022, 6:46 PM IST

ಹುಬ್ಬಳ್ಳಿ (ಏ.23): ಹಳೇ ಹುಬ್ಬಳ್ಳಿಯಲ್ಲಿ (Old Hubballi) ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಎಐಎಂಐಎಂ ನ  (AIMIM)ನಜೀರ್ ಅಹ್ಮದ್ ಎಂ ಹೊನ್ಯಾಳ (Nazeer Ahmad M Honnyal ) ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ನಜೀರ್ ಅಹ್ಮದ್ ಹೊನ್ಯಾಳ 71ನೇ ವಾರ್ಡ್ ನ ಸದಸ್ಯರಾಗಿದ್ದು, ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೆ, ಪೊಲೀಸ್ ಠಾಣೆಯ ಮುಂದೆ ಜನರನ್ನು ಸೇರಿಸಿರುವ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ನಜೀರ್ ಅಹ್ಮದ್ ರನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದ್ದಾರೆ.

Hubballi Riot: ಮಾಸ್ಟರ್ ಮೈಂಡ್ ವಸೀಂ ಮೊಬೈಲ್ ಮಂಗಮಾಯ, ಬಾಯ್ಬಿಡ್ತಿಲ್ಲ ಕಿಡಿಗೇಡಿ

ಘಟನೆಗೆ ಸಂಬಂಧಪಟ್ಟಂತೆ  ಪೊಲೀಸರು ಈಗಾಗಲೇ ಸಾಕಷ್ಟು ಮಂದಿಯನ್ನು ಬಂಧಿಸಿದ್ದು, ತನಿಖೆಯನ್ನು ಇನ್ನಷ್ಟು ತೀವ್ರ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ರೂವಾರಿಯಾಗಿದ್ದ ನಜೀರ್ ಅಹ್ಮದ್, ಗಲಭೆಯ ಬಳಿಕ ಗೋವಾಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Video Top Stories