
ಖಾಸಗಿ ಸಾರಿಗೆ ಕಂಪನಿಗಳ ವಿರುದ್ಧ ಹೆಚ್ಚುವರಿ ಶುಲ್ಕ ವಸೂಲಿ ಆರೋಪ
ಓಲಾ, ಉಬರ್ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು,ಹೆಚ್ಚುವರಿ ಶುಲ್ಕ ವಸೂಲಿ ಆರೋಪದ ಮೇಲೆ ಖಾಸಗಿ ಸಾರಿಗೆ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಓಲಾ, ಉಬರ್ ನಂತಹ ಖಾಸಗಿ ಸಾರಿಗೆ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು,ನಿಯಮ ಉಲ್ಲಂಘಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.ಇನ್ನು ನೋಟಿಸ್ ಜಾರಿಯಾದ ಮೂರು ದಿನಗಳಲ್ಲಿ ಖಾಸಗಿ ಸಾರಿಗೆ ಕಂಪನಿಗಳು ಉತ್ತರವನ್ನು ನೀಡುವಂತೆ ಸೂಚಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಉತ್ತರವನ್ನು ನೀಡಿದ ಕಂಪನಿಗಳು. ಈಗ ಸಾರಿಗೆ ಇಲಾಖೆ ಜೊತೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದೆ.