News Hour: ಜಾತಿ ನಿಂದನೆ ಪ್ರಕರಣ, ಸಚಿವರ ವಿರುದ್ಧ ಕೇಸ್‌ ಹಾಕೋಕೆ ಬೆದರಿದರಾ ಪೊಲೀಸರು?

ನಟ ಉಪೇಂದ್ರ ಬಳಸಿದ್ದ ಆಕ್ಷೇಪಾರ್ಹ ಪದಗಳನ್ನೇ ರಾಜ್ಯ ಸರ್ಕಾರದ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಬಳಸಿದ್ದಾರೆ. ಹಾಗಿದ್ದರೂ ಅವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಲ್ಲ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.15): ಫೇಸ್‌ಬುಕ್‌ ಲೈವ್‌ನಲ್ಲಿ ನಟ ಉಪೇಂದ್ರ ದಲಿತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ವಿವಿಧ ಠಾಣೆಗಳಲ್ಲಿ ಮೂರೂ ಮೂರು ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ, ಇದೇ ರೀತಿಯ ಪದ ಅಥವಾ ಗಾದೆ ಮಾತನ್ನು ಬಳಸಿರುವ ರಾಜ್ಯ ಸರ್ಕಾರದ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ವಿರುದ್ಧ ಕನಿಷ್ಠ ಎಫ್‌ಐಆರ್‌ ದಾಖಲು ಮಾಡೋಕೆ ಪೋಲಿಸಲು ಹೆದರಿದ್ದಾರೆ.

ಸಚಿವರ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದಾಗ, ಪೊಲೀಸರು 'ಎನ್‌ಸಿಆರ್‌' ಹಾಕಿ ಕಳಿಸಿದ್ದಾರೆ. ಅಂದರೆ ಗಂಭೀರವಲ್ಲದ ಪ್ರಕರಣ ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈಗ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

ಇನ್ನು ಉಪೇಂದ್ರ ಹೇಳಿದ ಮಾತಿಗೆ ಸಚಿವರಾದ ಎಚ್‌ಸಿ ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರ ಪಕ್ಷದ ನಾಯಕರೇ ಇದೇ ಮಾತನ್ನು ಹೇಳಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸ್ವಪಕ್ಷದ ನಾಯಕರು ಇದರ ವಿರುದ್ಧ ಟೀಕೆ ಮಾಡ್ತಾರಾ ಎನ್ನುವ ಪ್ರಶ್ನೆಗಳೂ ಎದ್ದಿವೆ.

Related Video