ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 3 ನೇ ಅಲೆ ಅಪಾಯಕಾರಿ: ತಜ್ಞರ ಎಚ್ಚರಿಕೆ
- ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 3 ನೇ ಅಲೆ ಅಪಾಯಕಾರಿ
- ಲಸಿಕೆ ಜೊತೆಗೆ ಪೌಷ್ಠಿಕ ಆಹಾರದ ಕಡೆಯೂ ಗಮನ ಕೊಡಬೇಕಾಗಿದೆ.
- ರಾಜ್ಯದಲ್ಲಿ 4.43 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ
ಬೆಂಗಳೂರು (ಮೇ. 31): 3 ನೇ ಅಲೆ ಮಕ್ಕಳಿಗೆ ಅಪಾಯ ಎನ್ನಲಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಮಕ್ಕಳಿಗೆ ಸೋಂಕು ತಗುಲಿತ್ತಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊರೋನಾ ಸೋಂಕು ತಗಲುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ 4.43 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಲಸಿಕೆ ಜೊತೆಗೆ ಪೌಷ್ಠಿಕ ಆಹಾರ ಕೊಡುವ ಕಡೆಯೂ ಸರ್ಕಾರ ಗಮನ ಕೊಡಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.