Asianet Suvarna News Asianet Suvarna News

ಗೌರಿ ಗಣೇಶ ವಿಸರ್ಜನೆಗೆ ಕೆರೆ ಕಲ್ಯಾಣಿಗಳಲ್ಲಿ ಅವಕಾಶವಿಲ್ಲ..!

ಹಬ್ಬ ಹರಿದಿನಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಗಣೇಶ ಮೂರ್ತಿಗಳನ್ನು ಕೆರೆ-ಕಲ್ಯಾಣಿಗಳನ್ನು ವಿಸರ್ಜನೆ ಮಾಡುವಂತಿಲ್ಲ. ಹಾಗೆಯೇ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆಗೆ ಬ್ರೇಕ್ ಹಾಕಲಾಗಿದೆ.
 
ಬೆಂಗಳೂರು(ಜು.31): ಕೊರೋನಾ ವೈರಸ್ ಜನ ಸಾಮಾನ್ಯರು ಮಾತ್ರವಲ್ಲ ಹಬ್ಬ ಹರಿದಿನಗಳಿಗೂ ಇದರ ಎಫೆಕ್ಟ್ ತಟ್ಟಲಾರಂಭಿಸಿದೆ. ಈ ಬಾರಿ ಗೌರಿ ಗಣೇಶ ಮೂರ್ತಿಗಳನ್ನು ಕೆರೆ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

ಹಬ್ಬ ಹರಿದಿನಗಳಿಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಗಣೇಶ ಮೂರ್ತಿಗಳನ್ನು ಕೆರೆ-ಕಲ್ಯಾಣಿಗಳನ್ನು ವಿಸರ್ಜನೆ ಮಾಡುವಂತಿಲ್ಲ. ಹಾಗೆಯೇ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆಗೆ ಬ್ರೇಕ್ ಹಾಕಲಾಗಿದೆ.

ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

ಸಾರ್ವಜನಿಕವಾಗಿ ಪ್ರಾಣಿ ವಧೆ ಹಾಗೂ ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಆಯಾ ಹಬ್ಬಗಳು ಕುಟುಂಬಕ್ಕೆ ಸೀಮಿತವಾಗಿರಲಿ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.