Asianet Suvarna News Asianet Suvarna News

4 ನೇ ಅಲೆ ಅಷ್ಟೊಂದು ಪ್ರಭಾವ ಬೀರುವ ಸಾಧ್ಯತೆ ಇಲ್ಲ: ಡಾ.ದೇವಿ ಶೆಟ್ಟಿ

ನಾಲ್ಕನೇ  ಅಲೆ (4 th Wave) ಅಷ್ಟೊಂದು ಪ್ರಭಾವ ಬೀರುವ ಸಾಧ್ಯತೆ ಇಲ್ಲ. ಕೊರೊನ ಮೂರನೇ ಅಲೆಯಲ್ಲಿ ಕೂಡ ಆತಂಕ ಇತ್ತು. ಆದ್ರೆ ನಮ್ಮಲ್ಲಿ ಅದರ ಪ್ರಭಾವ ಅಷ್ಟೊಂದು ಕಂಡುಬಂದಿರಲಿಲ್ಲ. ಆದರೂ ಕೂಡ ನಾವು ಸುರಕ್ಷತೆ (Safty Measures) ಕಾಪಾಡಿಕೊಳ್ಳಬೇಕು: ಡಾ.ದೇವಿ ಶೆಟ್ಟಿ  

ಬೆಂಗಳೂರು (ಏ. 25): ನಾಲ್ಕನೇ ಅಲೆ (4 th Wave) ಅಷ್ಟೊಂದು ಪ್ರಭಾವ ಬೀರುವ ಸಾಧ್ಯತೆ ಇಲ್ಲ. ಕೊರೊನ ಮೂರನೇ ಅಲೆಯಲ್ಲಿ (3rd Wave) ಕೂಡ ಆತಂಕ ಇತ್ತು. ಆದ್ರೆ ನಮ್ಮಲ್ಲಿ ಅದರ ಪ್ರಭಾವ ಅಷ್ಟೊಂದು ಕಂಡುಬಂದಿರಲಿಲ್ಲ. ಆದರೂ ಕೂಡ ನಾವು ಸುರಕ್ಷತೆ ಕಾಪಾಡಿಕೊಳ್ಳಬೇಕು. ಸೋಂಕು ಕಂಡುಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಬೇಕು. ಮಾಸ್ಕ್  (Mask) ಧರಿಸುವುದು ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಆಸ್ಪತ್ರೆಗಳಲ್ಲಿ ರೋಗಿಗಳು ಎಷ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನ ಗುಣಮುಖರಾಗುತ್ತಿದ್ದಾರೆ ಎನ್ನುವುದು ಮುಖ್ಯ. ನಮ್ಮಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಯಾರು ಕೂಡ ಭಯ ಪಡುವ ಅಗತ್ಯ ಇಲ್ಲ' ಎಂದು  ಆನೇಕಲ್‌ನ ಅತ್ತಿಬೆಲೆಯಲ್ಲಿ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವದಲ್ಲಿ ಡಾ.ದೇವಿ ಶೆಟ್ಟಿ  ಹೇಳಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ 4 ನೇ ಅಲೆ ರೂಲ್ಸ್, ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

ರಾಜ್ಯದಲ್ಲಿ ಈಗಾಗಲೇ ಕೊರೋನಾ 4ನೇ ಅಲೆಯ ಆರಂಭದ ಲಕ್ಷಣಗಳು ಗೋಚರಿಸಿವೆ. ಮುಂದಿನ ನಾಲ್ಕೈದು ವಾರಗಳಲ್ಲೇ ನಾಲ್ಕನೇ ಅಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ (Dr. CN Manjunath) ಹೇಳಿದ್ದಾರೆ.

 

Video Top Stories