Asianet Suvarna News Asianet Suvarna News

ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯುವ ಹುನ್ನಾರ

ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರ

ಭಾವನಾತ್ಮಾಕ ವಿಚಾರವನ್ನು ಮುಂದೆ ತರುವ ಹುನ್ನಾರ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು (ಮಾ. 23): ಹಿಂದೂ ಜಾತ್ರೆಗಳಲ್ಲಿ (HIndu Jatre) ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ನಿರ್ಬಂಧ ವಿಧಿಸಿರುವ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ( former cm HD Kumaraswamy), ಬಿಜೆಪಿ (BJP) ಸರ್ಕಾರವನ್ನು ಟೀಕಿಸಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಇಂಥ ಗಿಮಿಕ್ ಗಳನ್ನು ಮಾಡಿಕೊಂಡೇ ಅಧಿಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಭಾವನಾತ್ಮಕ ವಿಚಾರವನ್ನು ಮುನ್ನಲೆಗೆ ತಂದು ಗಮನಸೆಳೆಯುವ ಪ್ರಯತ್ನ ಮಾಡಲಿದೆ ಎಂದು ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಮಂಗಳೂರಿನ (Mangaluru) ವಿಚಾರವನ್ನು ಇಡೀ ರಾಜ್ಯವ್ಯಾಪಿ ತರಲು ಸರ್ಕಾರ ಹೊರಟಿದೆ. ಚುನಾವಣೆಯ ಒಳಗೆ ಇನ್ನು ಏನೆಲ್ಲಾ ಮಾಡ್ತಾರೋ ಗೊತ್ತಿಲ್ಲ. ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯುವ ಹುನ್ನಾರವಿದು ಎಂದು ಎಚ್ ಡಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

Kapu Marigudi Jatra: ಕಳಚಿದ ಸೌಹಾರ್ದತೆಯ ಕೊಂಡಿ, 2ನೇ ದಿನವು ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಬಿಜೆಪಿ ಹಾಗೂ ಅವರ ಸಂಘಟನೆಗಳು ಭಾವನಾತ್ಮಕ ವಿಚಾರವನ್ನು, ಕೋಮು ಸಂಘರ್ಷ ಕೆರಳಿಸುವ ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ರಾಜ್ಯದಲ್ಲಿರುವ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡಿದೆ. ಅಭಿವೃದ್ದಿ ವಿಚಾರವನ್ನು ಚರ್ಚೆ ಮಾಡುವ ಯಾವುದೇ ಸರಕು ಸರ್ಕಾರದಲ್ಲಿಲ್ಲ. ಉತ್ತರ ಭಾರತ ಶೈಲಿಯ ಚುನಾವಣಾ ತಂತ್ರವನ್ನು ಕರ್ನಾಟಕದಲ್ಲಿ ಪರಿಚಯಿಸುವ ರೀತಿ ಕಾಣುತ್ತಿದೆ' ಎಂದು ಎಚ್ ಡಿಕೆ ತಿಳಿಸಿದ್ದಾರೆ.

Video Top Stories