Asianet Suvarna News Asianet Suvarna News

ಪಿಎಫ್ಐ ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣು: ಪೊಲೀಸ್ ಇಲಾಖೆಗೆ ಎನ್.ಐ.ಎ ಕೊಟ್ಟ ಸೂಚನೆ ಏನು?

ಪಿಎಫ್‌ಐ ಸಂಘಟನೆ ನಿಷೇಧದ ನಂತರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು ಕೂಡ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಗೆ ಎನ್.ಐ.ಎ ಮಹತ್ವದ ಸೂಚನೆಯನ್ನು ನೀಡಿದೆ.

First Published Oct 22, 2022, 11:48 AM IST | Last Updated Oct 22, 2022, 11:48 AM IST

ಪಿಎಫ್ಐ ಕಾರ್ಯಕರ್ತರ ಟೆಲಿಗ್ರಾಂ  ಜಾಲಾಡಲು ಸಂದೇಶ ನೀಡಲಾಗಿದ್ದು, ಖುದ್ದು ಮಾನಿಟರಿಂಗ್ ಮಾಡುವಂತೆ ಕಮೀಷನರ್‌ಗೆ ಸೂಚನೆ ನೀಡಲಾಗಿದೆ. ಎನ್.ಐ.ಎ ಅಲರ್ಟ್ ಆದ ಬೆನ್ನಲ್ಲೇ ಪೊಲೀಸ್ ಆಯುಕ್ತ  ಪ್ರತಾಪ್‌ ರೆಡ್ಡಿ ಸೈಬರ್ ಇನ್ಸ್ಪೆಕ್ಟರ್ ಜೊತೆ ಸಭೆ ನಡೆಸಿದ್ದಾರೆ. ಬೇರೆ ಕಮ್ಯೂನಿಕೆಷನ್ ಆ್ಯಪ್'ಗಳಿಗಿಂತ ಟೆಲಿಗ್ರಾಂ ಹೆಚ್ಚು ಸೆಕ್ಯೂರ್ ಆಗಿದ್ದು,ತನಿಖಾ ಸಂಸ್ಥೆಗಳಿಗೂ ಟ್ರ್ಯಾಕ್‌ ಮಾಡುವುದು ಕಷ್ಟವಾಗುತ್ತದೆ. ಇನ್ನು ಕೆ.ಜಿ ಹಳ್ಳಿ ಕೇಸ್ ಆರೋಪಿಗಳ ಟೆಲಿಗ್ರಾಂ ಅಕೌಂಟ್ ಪರಿಶೀಲನೆ ನಡೆದಿದ್ದು, ಆ ಗಲಾಟೆಗೂ ಟೆಲಿಗ್ರಾಂ ಆ್ಯಪ್'ನಲ್ಲೇ ಪ್ಲಾನ್ ಮಾಡಿರುವ ಶಂಕೆ ಇದ್ದು,ಟೆಲಿಗ್ರಾಂನಲ್ಲಿ ಡಿಲೀಟ್ ಆಗಿರೋ ಮೇಸೆಜ್ ರಿಟ್ರೀವ್'ಗೆ ಸಿದ್ಧತೆ ನಡೆದಿದೆ. ರಿಟ್ರೀವ್ ಬಳಿಕ ಮತ್ತಷ್ಟು ಸ್ಫೋಟಕ ವಿಚಾರ ಬಯಲಾಗುವ ಸಾಧ್ಯತೆಯಿದೆ.

ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ ; ಶಿವಾನಂದ ಕಾಪಶಿ

Video Top Stories