
ಕೊರೋನಾ ಹೊಸ ರೂಪ: ಹೊಸ ನಿಯಮ ಘೋಷಿಸಿದ ಸಿಎಂ ಯಡಿಯೂರಪ್ಪ
ಕೊರೋನಾದ ಹೊಸ ರೂಪ ಪತ್ತೆ| ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ| ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ| ವೈರಸ್‌ನ ಹೊಸ ರೂಪ ಹರಡದಂತೆ ಎಚ್ಚರಿಕೆ|
ಬೆಂಗಳೂರು(ಡಿ.22): ಮಹಾಮಾರಿ ಕೊರೋನಾದ ಹೊಸ ರೂಪ ಪತ್ತೆಯಾದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು ಸೂಚನೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚುನಾವಣಾ ಅಖಾಡ: ಮತಗಟ್ಟೆಗಳಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು
ಕರ್ನಾಟಕದಲ್ಲಿ ಕೊರೋನಾದ ವೈರಸ್‌ನ ಹೊಸ ರೂಪ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಬ್ರಿಟನ್‌ನಿಂದ ಬಂದ ಚೆನ್ನೈನ ವ್ಯಕ್ತಿಯಲ್ಲಿ ಹೊಸ ಕೊರೋನಾ ವೈರಸ್ ಕಂಡು ಬಂದಿದೆ. ಹೀಗಾಗಿ ವೈರಸ್ ಹರಡದಂತೆ ಹೈಲರ್ಟ್ ಘೋಷಿಸಲಾಗಿದೆ.