News Hour: ನಕ್ಸಲರ ಶರಣಾಗತಿ.. ಶಸ್ತ್ರಾಸ್ತ್ರ ಎಲ್ಲಿ..?
6 ನಕ್ಸಲರ ಶರಣಾಗತಿಯ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದ್ದು, NIA ತನಿಖೆಗೆ ಆಗ್ರಹಿಸಿದೆ. ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ ಹೈಕಮಾಂಡ್ ತಲುಪಿದ್ದು, ಸಿಎಂ ಮತ್ತು ಡಿಸಿಎಂ ದೆಹಲಿಗೆ ತಲಪಲಿದ್ದಾರೆ. ಬಿಜೆಪಿ ಬಂಡಾಯಕ್ಕೆ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದೆ.
ಬೆಂಗಳೂರು (ಜ.9): ಶರಣಾದ 6 ನಕ್ಸಲರಿಗೆ ಇಂದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೆಂಪು ಉಗ್ರರು ಬಳಸಿದ್ದ ಶಸ್ತ್ರಾಸ್ತ್ರವನ್ನು ಪೊಲೀಸರು ಬೆನ್ನತ್ತಿದ್ದಾರೆ. ಶರಣಾಗತಿ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದ್ದು, NIA ತನಿಖೆಗೆ ಆಗ್ರಹಿಸಿದೆ.
ನಕ್ಸಲರು ಶರಣಾಗಿರುವ ರೀತಿಯ ಬಗ್ಗೆ ಬಿಜೆಪಿ ನಾಯಕರು ಸಿಡಿದೆದಿದ್ದಾರೆ. ಉಗ್ರರು ಇದೇ ರೀತಿಯಲ್ಲಿ ಶರಣಾದರೆ ಬಿಟ್ಟುಬಿಡ್ತೀರಾ ಎಂದು ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರ ಬೀಗುತ್ತಿದ್ದರೂ ಇನ್ನೂ ಓರ್ವ ಕುಖ್ಯಾತ ನಕ್ಸಲ್ ಸುಳಿವಿಲ್ಲ!
ಇನ್ನೊಂದೆಡೆ, ಕಾಂಗ್ರೆಸ್ ಡಿನ್ನರ್ ಫೈಟ್ ಹೈಕಮಾಂಡ್ ಅಂಗಳ ತಲುಪಿದೆ. ಜನವರಿ 14ಕ್ಕೆ ದೆಹಲಿಗೆ ಬರಲು ಸಿಎಂ, ಡಿಸಿಎಂಗೆ ಬುಲಾವ್ ಸಿಕ್ಕಿದೆ. ಶತ್ರುನಾಶಕ್ಕಾಗಿ ತಮಿಳುನಾಡಲ್ಲಿ ಡಿಕೆಶಿ ಹೋಮ ನಡೆಸಿದ್ದಾರೆ. ರಾಜ್ಯ ಬಿಜೆಪಿ ಬಂಡಾಯಕ್ಕೆ ಕೊನೆಗೂ ಹೈಕಮಾಂಡ್ ಮದ್ದರೆದಿದೆ. ಹೊಸ ಟೀಂ ರಚಿಸಿ ಎಂದು ವಿಜಯೇಂದ್ರಗೆ ಖಡಕ್ ಸೂಚನೆ ನೀಡಲಾಗಿದೆ. ಸಕ್ಸಸ್ ಆಯ್ತಾ ಯತ್ನಾಳ್ ಬಣದ ಹೋರಾಟ ಎನ್ನುವ ಪ್ರಶ್ನೆ ಎದ್ದಿದೆ.