Russia-Ukraine War: ದಾವಣಗೆರೆ SS ಕಾಲೇಜಿಗೆ ನವೀನ್ ದೇಹದಾನ ಮಾಡಲು ಕುಟುಂಬಸ್ಥರ ನಿರ್ಧಾರ

ಯುದ್ಧ​ಪೀ​ಡಿತ ಉಕ್ರೇ​ನ್‌​ನಲ್ಲಿ ಮೃತಪಟ್ಟಕನ್ನಡಿಗ, ಹಾವೇರಿ ಮೂಲದ ಎಂಬಿಬಿಎಸ್‌ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ವಾಪಸ್‌ ತರುವ ಪ್ರಯ​ತ್ನ​ದಲ್ಲಿ ಸರ್ಕಾರ ಕೊನೆಗೂ ಯಶಕಂಡಿ​ದೆ. 

First Published Mar 19, 2022, 11:01 AM IST | Last Updated Mar 19, 2022, 11:18 AM IST

ದಾವಣಗೆರೆ (ಮಾ. 19): ಯುದ್ಧ​ಪೀ​ಡಿತ ಉಕ್ರೇ​ನ್‌​ನಲ್ಲಿ ಮೃತಪಟ್ಟಕನ್ನಡಿಗ, ಹಾವೇರಿ ಮೂಲದ ಎಂಬಿಬಿಎಸ್‌ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ವಾಪಸ್‌ ತರುವ ಪ್ರಯ​ತ್ನ​ದಲ್ಲಿ ಸರ್ಕಾರ ಕೊನೆಗೂ ಯಶಕಂಡಿ​ದೆ. ನವೀನ್‌ ಮೃತ​ದೇಹ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಂತರ ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ.

Bhagavad Gita: ಭಗವದ್ಗೀತೆ ಪಠ್ಯಕ್ಕೆ ಗುಜರಾತಲ್ಲಿ ಸ್ವಾಗತ, ರಾಜ್ಯದಲ್ಲಿ ವಿರೋಧ

ಉಕ್ರೇ​ನ್‌​ನಿಂದ ವಾಪಸ್‌ ಬರು​ತ್ತಿ​ರುವ ನವೀನ್‌ ಮೃತ​ದೇ​ಹ​ವನ್ನು ವೈದ್ಯ​ಕೀಯ ವಿದ್ಯಾ​ರ್ಥಿ​ಗಳ ಅನು​ಕೂ​ಲ​ಕ್ಕಾಗಿ ದಾವ​ಣ​ಗೆ​ರೆಯ ಎಸ್‌.ಎ​ಸ್‌.​ಮೆ​ಡಿ​ಕಲ್‌ ಕಾಲೇ​ಜಿಗೆ ನೀಡಲು ಕುಟುಂಬ​ದ​ವರು ನಿರ್ಧ​ರಿ​ಸಿ​ದ್ದಾರೆ. ಡಾಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದ ನವೀನ್‌ ಆಸೆ ಈಡೇರಲಿಲ್ಲ. ಕೊನೇ ಪಕ್ಷ ಆತನ ದೇಹ ಮೆಡಿಕಲ್‌ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನವೀನ್‌ ತಂದೆ ಶೇಖರಪ್ಪ ಗ್ಯಾನಗೌಡರ ಹೇಳಿ​ದ್ದಾ​ರೆ.