ನಾಗಮಂಗಲ ಗಲಭೆ ಎಫ್ಐಆರ್‌ನಲ್ಲೇ ರಾಜಕಾರಣ, ಗಣೇಶ ಪ್ರತಿಷ್ಠಾಪಿಸಿದವರೇ ಎ1 ಆರೋಪಿ!

ನಾಗಮಂಗಲ ಗಣೇಶ ವಿಸರ್ಜನೆ ಮೇಲಿನ ದಾಳಿಯಲ್ಲಿ ಒಂದು ಸಮುದಾಯವನ್ನು ಬಚಾವ್ ಮಾಡಲು ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಎಫ್ಐಆರ್‌ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ.

First Published Sep 14, 2024, 12:02 AM IST | Last Updated Sep 14, 2024, 12:02 AM IST

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೇಲೆ ಅನ್ಯಕೋಮಿನ ದಾಳಿ ಘಟನೆಯಲ್ಲಿ ಇದೀಗ ರಾಜಕಾರಣ ವಾಸನೆ ಬಡಿಯುತ್ತಿದೆ. ಪೆಟ್ರೋಲ್ ಬಾಂಬ್ ದಾಳಿಯನ್ನೇ ಆಕಸ್ಮಿಕ ಘಟನೆ ಎಂದಿದ್ದ ಸರ್ಕಾರ ಇದೀಗ ಎಫ್ಐಆರ್‌ನಲ್ಲೂ ರಾಜಕೀಯ ಮಾಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಗಣೇಶ ವಿಸರ್ಜನೆ ಮೇಲೆ ಪೆಟ್ರೋಲ್ ಬಾಂಬ್, ಕಲ್ಲು ತೂರಾಟ ನಡೆಸಿದವರ ಬದಲು, ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದವರನ್ನೇ ಎಫ್ಐಆರ್‌ನಲ್ಲಿ ಎ1 ಆರೋಪಿಗಳಾಗಿ ಮಾಡಲಾಗಿದೆ. ಎ1 ಆರೋಪಿಯಿಂದ ಎ23 ಆರೋಪಿ ವರೆಗೆ ಹಿಂದೂಗಳ ಹೆಸರಿದೆ. ಎ24 ರಿಂದ ಪೆಟ್ರೋಲ್ ಬಾಂಬ್, ಕಲ್ಲು ತೂರಿದವರ ಹೆಸರು ಉಲ್ಲೇಖಿಸಲಾಗಿದೆ.