Asianet Suvarna News Asianet Suvarna News

ಮೈಸೂರು ಮೃಗಾಲಯದಲ್ಲಿ ಮುದ್ದು ಜಿರಾಫೆ ಮರಿಗಳು

ವರ್ಷಗಳಿಂದ ಜನರಿಲ್ಲದೆ ಕಂಗೆಟ್ಟಿದ್ದ ಮೈಸೂರು ಮೃಗಾಲಯದಲ್ಲಿ ಎರಡೆರಡು ಸಂಭ್ರಮ. ಸದ್ದಿಲ್ಲದೆ ಪ್ರವಾಸಿಗರ ಆಗಮನ ಹೆಚ್ಚಾಗಿರುವ ಬೆನ್ನಲ್ಲೇ ಜಿರಾಫೆಗಳು ಸಂತಾನದಲ್ಲಿ ದಾಖಲೆ ಬರೆದಿವೆ. ಮೃಗಾಲಯಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.

First Published Jul 31, 2021, 5:59 PM IST | Last Updated Jul 31, 2021, 8:05 PM IST

ಮೈಸೂರು(ಜು.31): ವರ್ಷಗಳಿಂದ ಜನರಿಲ್ಲದೆ ಕಂಗೆಟ್ಟಿದ್ದ ಮೈಸೂರು ಮೃಗಾಲಯದಲ್ಲಿ ಎರಡೆರಡು ಸಂಭ್ರಮ. ಸದ್ದಿಲ್ಲದೆ ಪ್ರವಾಸಿಗರ ಆಗಮನ ಹೆಚ್ಚಾಗಿರುವ ಬೆನ್ನಲ್ಲೇ ಜಿರಾಫೆಗಳು ಸಂತಾನದಲ್ಲಿ ದಾಖಲೆ ಬರೆದಿವೆ. ಮೃಗಾಲಯಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.

ಲಕ್ಷ್ಮೀ - ಭರತ್ ಜೋಡಿ ಜಿರಾಫೆಗೆ ಗಂಡು ಜಿರಾಫೆ ಜನಿಸಿದೆ. ಹೊಸ ಅತಿಥಿಯ ಆಗಮನದೊಂದಿಗೆ ಮೈಸೂರು ಝೂನಲ್ಲಿ ಹುಟ್ಟಿದ ಜಿರಾಫೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪುಟ್ಟ ಅತಿಥಿಯ ಸುದ್ದಿ ತಿಳಿದಂತೆ ಪ್ರವಾಸಿಗರು ಝೂನತ್ತ ಧಾವಿಸಿದ್ದಾರೆ. ಬುಕ್ ಆಫ್‌ ರೆಕಾರ್ಡ್‌ನಲ್ಲಿಯೂ ಮೈಸೂರು ಝೂ ಝೀರಾಫೆ ಸಂತಾನೋಪತ್ಪತ್ತಿ ದಾಖಲಾಗುತ್ತಿದೆ. ಪ್ರಪಂಚದ ಟಾಪ್ 10 ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರು ಝೂನಲ್ಲಿ ಪ್ರಾಣಿ ವಿನಿಮಯವೂ ಹೆಚ್ಚಾಗಿದೆ.