ಸರಳ ದಸರಾನಾ? ಅದ್ಧೂರಿ ದಸರಾನಾ? ಸರ್ಕಾರದ ಈ ನಡೆ ವಿವಾದಕ್ಕೆ ಎಡೆ

ಕೊರೊನಾ ಸಂಕಷ್ಟದ ನಡುವೆ ನಾಡಹಬ್ಬ ದಸರಾ ಆಚರಣೆಗೆ ಸಿದ್ದತೆ ನಡೆಯುತ್ತಿದೆ. ಮೈಸೂರು ತುಂಬೆಲ್ಲಾ ದೀಪಾಲಂಕಾರಕ್ಕೆ ವಿರೋಧ ವ್ಯಕ್ತವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 08): ಕೊರೊನಾ ಸಂಕಷ್ಟದ ನಡುವೆ ನಾಡಹಬ್ಬ ದಸರಾ ಆಚರಣೆಗೆ ಸಿದ್ದತೆ ನಡೆಯುತ್ತಿದೆ. ಮೈಸೂರು ತುಂಬೆಲ್ಲಾ ದೀಪಾಲಂಕಾರಕ್ಕೆ ವಿರೋಧ ವ್ಯಕ್ತವಾಗಿದೆ. ದೀಪಾಲಂಕಾರ ನೋಡಲು ಜನ ಬರುತ್ತಾರೆ. ಹೆಚ್ಚು ಹೆಚ್ಚು ಜನ ಬಂದರೆ ಕೊರೊನಾ ಹರುಡುವ ಭೀತಿ ಇರುವುದರಿಂದ ಅದ್ದೂರಿ ದಸರಾ ಬೇಡ. ದೇಶ ವಿದೇಶಗಳಿಂದಲೂ ಜನ ಬರುವುದರಿಂದ ಕೊರೊನಾ ಹರಡುವ ಅಪಾಯ ಎದುರಾಗುತ್ತದೆ. ಹಾಗಾಗಿ ಸರಳ ದಸರ ಆಚರಿಸಿದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಆದರೆ ಸರಳ ದಸರಾ ಎಂದು ಹೇಳುತ್ತಿರುವ ಸರ್ಕಾರ 15 ಕೋಟಿ ರೂ ಬಿಡುಗಡೆ ಮಾಡಿದೆ. ಇದು ವಿವಾದಕ್ಕೆ ಎಡೆಯಾಗಿದೆ. ಸರಳ ದಸರಾಗೆ 15 ಕೋಟಿ ರೂ ಬೇಕಾ? ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ನಂಜರಾಜೇ ಅರಸ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನೋಡಿ..!

Related Video