Asianet Suvarna News Asianet Suvarna News

ಬಿಜೆಪಿಯಿಂದ ಆಗಿಲ್ಲ, ನಮ್ಮವರಿಂದಲೇ ಚೂರಿ; ಸ್ವಪಕ್ಷೀಯರ ಕುಟುಕಿದ ಬಿಕೆ ಹರಿಪ್ರಸಾದ್!

ಕಾಂಗ್ರೆಸ್ ನಾಯಕರನ್ನು ಬಿಕೆ ಹರಿಪ್ರಸಾದ್ ಮತ್ತೆ ಕುಟುಕಿದ್ದಾರೆ, ನನಗೆ ಸಮಸ್ಯೆ ಆಗಿದ್ದರೆ ಅದು ನಮ್ಮವರಿಂದಲೇ ಎಂದಿದ್ದಾರೆ. ಜಮ್ಮು ಕಾಶ್ಮೀರ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಿ ಮೀಸಲಾತಿ ನೀಡಿದ ಕೇಂದ್ರ, ಮುಸ್ಲಿಮರಿಗೆ 10 ಸಾವಿರ ಕೋಟಿ ಅನುದಾನ, ಕಾಂಗ್ರೆಸ್ ಬೆವರಿಳಿಸಿದ ಬಿಜೆಪಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಬಹಿರಂಗ ಹೇಳಿಕೆ ನೀಡುತ್ತಾ ಬಂಡಾಯ ನಾಯಕನಾಗಿ ಗುರುತಿಸಿಕೊಂಡಿರುವ ಬಿಕೆ ಹರಿಪ್ರಸಾದ್ ಇದೀಗ ಸದನದಲ್ಲೇ ಸ್ಪಪಕ್ಷೀಯರ ವಿರುದ್ಧ ಹರಿಹಾಯ್ದಿದ್ದಾರೆ. ನನಗೆ ವಿರೋಧ ಪಕ್ಷದಿಂದ ಯಾವುದೇ ಸಮಸ್ಯೆ ಯಾಗಿಲ್ಲ. ಇಡಿ, ಐಟಿ ದಾಳಿ ನನ್ನ ಮೇಲೆ ನಡೆದಿಲ್ಲ. ಆದರೆ ನಮ್ಮವರೇ ಚೂರಿ ಹಾಕಿದ್ದಾರೆ. ಅದನ್ನು ಸಹಿಸಿಕೊಂಡು ಇದ್ದೇನೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಸದನದಲ್ಲಿ ಹೇಳಿದ್ದಾರೆ.ಇತ್ತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಮಾಡಿದ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದಿನ ಇಡಿನ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories