Asianet Suvarna News Asianet Suvarna News

'ಧರ್ಮ ಗುರುಗಳು, ರಾಜಕೀಯ ನಾಯಕರು, ಕೈ ಕಟ್ಟಿ ಕುಳಿತಿದ್ದಾರೆ'; ಡಿಜೆ ಹಳ್ಳಿ ಮಹಿಳೆಯರ ಆಕ್ರೋಶ

Aug 19, 2020, 4:45 PM IST

ಬೆಂಗಳೂರು (ಆ 19): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 350 ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಧರ್ಮ ಗುರುಗಳು, ರಾಜಕೀಯ ನಾಯಕರು, ಕೈ ಕಟ್ಟಿ ಕುಳಿತಿದ್ದಾರೆ. ಅಮಾಯಕ ಮಕ್ಕಳನ್ನು ಪೊಲೀಸರು ಜೈಲಿಗೆ ಹಾಕುತ್ತಿದ್ದಾರೆ. ಮುಸ್ಲಿಂ ಮುಖಂಡರು ಕೈ ಕಟ್ಟಿ ಕುಳಿತರೆ ನಾವು ಗುಲಾಮರಾಗುತ್ತೇವೆ' ಎಂದು ಡಿಜೆ ಹಳ್ಳಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾನೂನಿನ ಮುಂದೆ ಎಲ್ಲರೂ ಸಮಾನರು. ಮುಸಲ್ಮಾನರು ಕೂಡಾ ಇದಕ್ಕೆ ಹೊರತಾಗಿಲ್ಲ. ಯಾರೂ ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅಮಾಯಕರಿಗೆ ಶಿಕ್ಷೆಯಾಗುವುದು ಸರಿಯಲ್ಲ. ಅಂತವರನ್ನು ಬಿಡಬೇಕು. ಈ ಬಗ್ಗೆ ಮುಸ್ಲಿಂ ಮುಖಂಡರು, ನಾಯಕರು ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಮಕ್ಕಳನ್ನು ನೋಡಿ ಕಣ್ಣೀರಿಟ್ಟ ಪೋಷಕರು; ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್ ಮುಂದೆ ಹೈಡ್ರಾಮಾ