ಹೈಕಮಾಂಡ್ ಸಲಹೆ ತಿರಸ್ಕರಿಸಿ ತಪ್ಪು ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

ಮುಡಾ ಸೈಟ್ ವಾಪಸ್ ನೀಡಲು ಸಲಹೆ ನೀಡಿದ್ದ ಹೈಕಮಾಂಡ್, ಮುಡಾ ಸೈಟ್ ಖಾತೆ ರದ್ದು, ಮತ್ತೆ ಅನುಮಾನ ಮೂಡಿಸಿದ ಸಿದ್ದರಾಮಯ್ಯ ನಡೆ, ದಿಲ್ಲಿಯಲ್ಲಿ ಮುಡಾ ಸೈಟ್ ದಂಗಲ್, ಬಿಜೆಪಿ ನಾಯಕರಿಂದ ಪ್ರಶ್ನೆಗಳ ಸುರಿಮಳೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ವಿರುದ್ದ ಮುಡಾ ಕೇಸ್ ಕೇಳಿಬರುತ್ತಿದ್ದಂತೆ ಹೈಕಮಾಂಡ್ ಮಹತ್ವದ ಸಲಹೆ ನೀಡಿತ್ತು ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಹೈಕಮಾಂಡ್ ಸಲಹೆ ತಿರಸ್ಕರಿಸಿದ ಸಿದ್ದರಾಮಯ್ಯ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಮುಡಾ ಸೈಟ್ ವಾಪಸ್ ಕೊಡುವಂತೆ ಸೂಚಿಸಿತ್ತು. ಆದರೆ ಸಲಹೆ ತಿರಸ್ಕರಿಸಿದ ಸಿದ್ದರಾಮಯ್ಯ, ಇದರಿಂದ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಗಟ್ಟಿ ನಿಲುವು ತಳೆದಿದ್ದರು ಎನ್ನಲಾಗುತ್ತಿದೆ. ಆದರೆ ಸಂಕಷ್ಟ ಹೆಚ್ಚಾಗುತ್ತಿದ್ದಂತೆ ಮುಡಾ ಸೈಟ್ ವಾಪಸ್ ನೀಡಿರುವ ಸಿದ್ದರಾಮಯ್ಯ ಪತ್ನಿ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಕರಣ ಇನ್ನಷ್ಟು ಜಟಿಲಾಗಿದೆ.

Related Video