ಬೆಂಗ್ಳೂರಿಗೆ ಆಕ್ಸಿಜನ್ ಕೊರತೆ ಆಗಲ್ಲ, ಭರವಸೆ ನೀಡಿದ ತೇಜಸ್ವಿ ಸೂರ್ಯ

ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಎಲ್ಲಾ ರೀತಿಯ ಪ್ರಯತ್ನ ನಡೆದಿದ್ದು, 40 ಟನ್ ಆಕ್ಸಿಜನ್‌ನ್ನು ಹೆಚ್ಚುವರಿಯಾಗಿ ಕೊಡಲು ಜಿಂದಾಲ್ ಕಂಪನಿ ಒಪ್ಪಿಗೆ ನೀಡಿದೆ. ಹಾಗಾಗಿ ಆಕ್ಸಿಜನ್ ಕೊರತೆಯಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. 

First Published Apr 21, 2021, 4:11 PM IST | Last Updated Apr 21, 2021, 4:34 PM IST

ಬೆಂಗಳೂರು (ಏ. 21): ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಎಲ್ಲಾ ರೀತಿಯ ಪ್ರಯತ್ನ ನಡೆದಿದ್ದು, 40 ಟನ್ ಆಕ್ಸಿಜನ್‌ನ್ನು ಹೆಚ್ಚುವರಿಯಾಗಿ ಕೊಡಲು ಜಿಂದಾಲ್ ಕಂಪನಿ ಒಪ್ಪಿಗೆ ನೀಡಿದೆ. ಹಾಗಾಗಿ ಆಕ್ಸಿಜನ್ ಕೊರತೆಯಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. 

ಆಕ್ಸಿಜನ್, ರೆಮ್ಡಿಸ್‌ವಿರ್ ಪೂರೈಕೆಗೆ ವಾರ್‌ ರೂಂ ಸ್ಥಾಪನೆ: ಡಾ. ಸುಧಾಕರ್ ಭರವಸೆ

'ಜಿಂದಾಲ್ ಕಂಪನಿ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ಹೆಚ್ಚುವರಿಯಾಗಿ 40 ಟನ್ ಆಕ್ಸಿಜನ್ ಕೊಡಲು ಒಪ್ಪಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಧನ್ಯವಾದಗಳು. ಜೊತೆಗೆ ರೆಮ್ಡೀಸ್‌ವೀರ್ ತರಿಸಿಕೊಳ್ಳಲು ಕೂಡಾ ಪ್ರಯತ್ನಿಸ್ತಾ ಇದ್ದೇವೆ' ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.