ಚಂದ್ರಶೇಖರ್ ಪ್ರಕರಣಕ್ಕೆ ಟ್ವಿಸ್ಟ್, ಸಾವಿಗೂ ಮುನ್ನ ಸ್ನೇಹಿತ ಸಂಜಯ್‌ಗೆ ಕರೆ!
ರೇಣುಕಾಚಾರ್ಯ ಸಹೋದರನ ಪುತ್ರನ ಸಾವು ಪ್ರಕರಣದಲ್ಲಿ ಕೆಲ ಮಾಹಿತಿಗಳು ಬಹಿರಂಗವಾಗಿದೆ. ಸಾವಿಗೂ ಮುನ್ನ 5ಕ್ಕೂ ಹೆಚ್ಚು ಬಾರಿ ಸ್ನೇಹತನಿಗೆ ಕರೆ ಮಾಡಲಾಗಿದೆ. ಈ ಕಾಲ್ ಡಿಟೇಲ್ಸ್‌ನಲ್ಲಿ ಏನಿದೆ?
ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಂದ್ರು ನಾಪತ್ತೆಯಾದ ದಿನ ಕೊನೆಯ ಬಾರಿಗೆ ಕರೆ ಮಾಡಿದ್ದು ಯಾರಿಗೆ? ರಾತ್ರಿ 11.30ಕ್ಕೆ ಕೊನೆಯ ಕರೆ ಮಾಡಲಾಗಿದೆ. ಒಂದೇ ನಂಬರ್‌ಗೆ 5ಕ್ಕೂ ಹೆಚ್ಚು ಬಾರಿ ಕರೆ ಮಾಡಲಾಗಿದೆ. ಸ್ನೇಹಿತ ಸಂಜಯ್ ಪದೇ ಪದೇ ಕರೆ ಮಾಡಿದ ವಿವರಗಳು ಲಭ್ಯವಾಗಿದೆ. ಫೋನ್ ಕರೆ ಕುರಿತು ಸ್ನೇಹಿತ ಸಂಜಯ್ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.