ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ 951ಕ್ಕೇರಿದ ಕೊರೋನಾ ಪೀಡಿತರ ಸಂಖ್ಯೆ..!
ಮಂಗಳವಾರ ಒಂದೇ ದಿನ 63 ಕೊರೋನಾ ಕೇಸ್‌ಗಳು ದಾಖಲಾಗುವ ಮೂಲಕ ರಾಜ್ಯದ ಜನ ಆತಂಕಕ್ಕೆ ಈಡಾಗುವಂತೆ ಮಾಡಿತ್ತು. ಆದರೆ ಇದೀಗ ಬೆಳಗಿನ ಹೆಲ್ತ್ ಬುಲೆಟಿನ್ ಅನ್ವಯ 26 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರು(ಮೇ.13): ಬುಧವಾರದ ಬೆಳಗ್ಗಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ 26 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ.
ಮಂಗಳವಾರ ಒಂದೇ ದಿನ 63 ಕೊರೋನಾ ಕೇಸ್‌ಗಳು ದಾಖಲಾಗುವ ಮೂಲಕ ರಾಜ್ಯದ ಜನ ಆತಂಕಕ್ಕೆ ಈಡಾಗುವಂತೆ ಮಾಡಿತ್ತು. ಆದರೆ ಇದೀಗ ಬೆಳಗಿನ ಹೆಲ್ತ್ ಬುಲೆಟಿನ್ ಅನ್ವಯ 26 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೋನಾ ವಾರಿಯರ್ಸ್‌ಗೆ ಬಿಗ್ ಶಾಕಿಂಗ್ ನ್ಯೂಸ್!
ಬೀದರ್‌ನಲ್ಲಿ 11, ಹಾಸನದಲ್ಲಿ 4, ಬೆಂಗಳೂರಿನಲ್ಲಿ ಹೊಸದಾಗಿ ಒಂದು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಮತ್ತೆ ಎಲ್ಲೆಲ್ಲಿ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.