Asianet Suvarna News Asianet Suvarna News

ಮುಂಗಾರು ಆರಂಭ: ಸಂಗಾತಿಯನ್ನು ಆಕರ್ಷಿಸಲು ಹಳದಿ ಬಣ್ಣ ಪಡೆದ ಗಂಡು ಕಪ್ಪೆಗಳು

ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ನೀಡಿದ್ದು, ಹೊಲ, ಗದ್ದೆ, ಕೆರೆ, ತೋಡು, ಚರಂಡಿಗಳಲ್ಲಿ ಓಡಾಡಿಕೊಂಡಿದ್ದ ಕಪ್ಪೆಗಳು ತಮ್ಮ ಸಂಗಾತಿಯನ್ನು ಆಕರ್ಷಿಸಲು ಬಣ್ಣ ಬದಲಿಸಿಕೊಂಡಿರುವುದು ಕಂಡು ಬಂದಿವೆ.

ಬೆಂಗಳೂರು (ಜೂ. 11): ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ನೀಡಿದ್ದು, ಈ ನಡುವೆ ಹೊಲ, ಗದ್ದೆ, ಕೆರೆ, ತೋಡು, ಚರಂಡಿಗಳಲ್ಲಿ ಓಡಾಡಿಕೊಂಡಿದ್ದ ಕಪ್ಪೆಗಳು ತಮ್ಮ ಸಂಗಾತಿಯನ್ನು ಆಕರ್ಷಿಸಲು ಬಣ್ಣ ಬದಲಿಸಿಕೊಂಡಿರುವುದು ಕಂಡು ಬಂದಿವೆ.

ಮಲೆನಾಡಿನಲ್ಲಿ ಎಲ್ಲೆಲ್ಲೂ ಈಗ ಹಳದಿ ಕಪ್ಪೆಗಳು!

ಮಳೆಯ ಸಿಂಚನ ಕಪ್ಪೆಗಳಿಗೆ ಚೈತನ್ಯವನ್ನು ತಂದುಕೊಟ್ಟಿದ್ದು, ಕಳೆದ 2-3 ದಿನಗಳಿಂದ ಮಳೆ‌ ಬೀಳುತ್ತಿದ್ದಂತೇ ಕರಾವಳಿ ಭಾಗದ ಗದ್ದೆಗಳಲ್ಲಿ ಹಳದಿ ಬಣ್ಣದ ಕಪ್ಪೆಗಳು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಮುಂಗಾರು ಆಗಮನದ ಕಾಲದಲ್ಲಿಯೇ ಸಂತಾನೋತ್ಪತ್ತಿ ಪ್ರಾರಂಭಿಸುವ ಗಂಡು ಕಪ್ಪೆಗಳು, ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ತನ್ನ ಬಣ್ಣ ಬದಲಿಸಿ ಹಳದಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಈ ಕಾರಣದಿಂದ ಹೊಲ, ಗದ್ದೆಗಳಲ್ಲಿ ಕಪ್ಪೆಗಳ ಕುಣಿದಾಟ, ಜಿಗಿದಾಟ ನೋಡುಗರನ್ನು ಆಕರ್ಷಿಸುತ್ತಿದೆ.