Asianet Suvarna News Asianet Suvarna News

MLC Election: ಬಿಜೆಪಿ ಪಕ್ಷ ಸಂಘಟನೆಗೂ ಸೈ, ಉದ್ಯಮದಲ್ಲೂ ಸೈ, ಮಂಡ್ಯ ಕಣದಲ್ಲಿ ಮಂಜು ಬೂಕಹಳ್ಳಿ

Dec 8, 2021, 2:09 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 08): ಬಿಜೆಪಿಯಿಂದ (BJP) ಪರಿಷತ್ ಅಭ್ಯರ್ಥಿಯಾಗಿ ಬೂಕಹಳ್ಳಿ ಮಂಜು (Manju Bookahalli) ಕಣದಲ್ಲಿದ್ದಾರೆ. ಮಂಜು ಬೂಕಹಳ್ಳಿ ಮಂಡ್ಯದಲ್ಲಿ ಯುವ ನಾಯಕರಾಗಿ ಹೆಸರು ಮಾಡಿದ್ದಾರೆ. ಸದಾ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಗಳ ಮೂಲಕ ಜನರಿಗೆ ಹತ್ತಿರವಾದವರು. ವಿದ್ಯಾರ್ಥಿ ಜೀವನದಿಂದಲೇ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. 

Mandya Politics: ಮಗನ ಸೋಲಿಗೆ ಪ್ರತ್ಯುತ್ತರ ನೀಡುವ ಮಾತುಗಳನ್ನಾಡಿದ ಕುಮಾರಸ್ವಾಮಿ

ಮಂಜು ಬೂಕಹಳ್ಳಿಯವರು ಯಶಸ್ವಿ ಉದ್ಯಮಿಯೂ (Business Man) ಹೌದು. ಈಗ ಕರ್ನಾಟಕದಲ್ಲಿ ವಿದ್ಯುತ್ ಕಂಬ ತಯಾರಿಸುವ ಉದ್ಯಮಿಗಳಲ್ಲಿ ಒಬ್ಬರು. ಇನ್ನು ಗ್ರಾಮಾಂತರ ಜನರ ಬವಣೆಗಳನ್ನು ಹತ್ತಿರದಿಂದ ನೋಡಿದ ಮಂಜು, ಜನರಿಗೆ ಉದ್ಯೋಗ ಕೊಡಲು ತಮ್ಮದೇ ಬ್ಯುಸಿನೆಸ್ ಶುರು ಮಾಡಿದ್ದಾರೆ. ಬ್ಯುಸಿನೆಸ್‌ನಲ್ಲಿ ಯಶಸ್ವಿ ಉದ್ಯಮಿ, ಪಕ್ಷ ಸಂಘಟನೆಯಲ್ಲೂ ಎತ್ತಿದ ಕೈ. ಇದೀಗ ಮಂಡ್ಯದಿಂದ ಸ್ಪರ್ಧಿಸಿದ್ದಾರೆ.