Karnataka Cabinet Expansion: ಸಿಎಂ ದೆಹಲಿ ಭೇಟಿಗೂ ಮುನ್ನ ಸಂಪುಟ ಸೇರಲು ಹಲವರ ಲಾಬಿ

ಗುರುವಾರ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವ ಬೆನ್ನಲ್ಲೇ , ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಯೂ ಗರಿಗೆದರಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಆಕಾಂಕ್ಷಿಗಳಿದ್ದು ಮುಖ್ಯಮಂತ್ರಿ ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.3): ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಂಪುಟ ವಿಸ್ತರಣೆಗೆ ಸಜ್ಜಾಗಿದ್ದು, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ. ಗುರುವಾರ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವ ಬೆನ್ನಲ್ಲೇ , ರಾಜ್ಯದಲ್ಲಿ ಸಂಪುಟ ವಿಸ್ತರಣೆಯ (Karnataka Cabinet Expansion) ಚರ್ಚೆಯೂ ಗರಿಗೆದರಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಆಕಾಂಕ್ಷಿಗಳಿದ್ದು ಮುಖ್ಯಮಂತ್ರಿ ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ. ಹಳೆಬರನ್ನು ಬಿಟ್ಟು ಹೊಸಬರನ್ನು ಸಚಿವರನ್ನಾಗಿ ಮಾಡಲು ಒತ್ತಡ ಹೆಚ್ಚಿದೆ ಎಂದು ಹೇಳಲಾಗಿದೆ.

Ramesh Jarkiholi Meets Devendra Fadnavis: ಗೋವಾದಲ್ಲಿ ಜಾರಕಿಹೊಳಿ - ಫಡ್ನವೀಸ್ ಭೇಟಿ!

 ಸಂಪುಟದಲ್ಲಿ ಸ್ಥಾನ ಪಡೆಯಲು 13 ಪ್ರಬಲ ಆಂಕಾಂಕ್ಷಿಗಳು ಕಾತರರಾಗಿದ್ದು, ಎಸ್‌.ಎ.ರಾಮದಾಸ್, ಹಿರಿಯೂರು ಶಾಸಕಿ ಪೂರ್ಣಿಮಾ, ಮೂಡಿಗೆರೆ ಕ್ಷೇತ್ರದ ಎಂ.ಪಿ ಕುಮಾರಸ್ವಾಮಿ, ಹಾವೇರಿ ಕ್ಷೇತ್ರದನೆಹರು ಓಲೆಕಾರ, ಸವದತ್ತಿ ಕ್ಷೇತ್ರದ ಆನಂದ್ ಮಾಮನಿ, ಹರತಾಳ್ ಹಾಲಪ್ಪ, ಎಂಪಿ ರೇಣುಕಾಚಾರ್ಯ, ಕಾರವಾರ ಕ್ಷೇತ್ರದ ರೂಪಾಲಿ ನಾಯಕ್ , ಕಲಬುರಗಿ ದಕ್ಷಿಣ ಕ್ಷೇತ್ರದ ದತ್ತಾತ್ರೆಯ ಪಾಟೀಲ್, ಬಳ್ಳಾರಿಯ ಸೋಮಶೇಖರ್ ರೆಡ್ಡಿ, ತೇರದಾಳದ ಸಿದ್ದು ಸವದಿ, ಸುರಪುರದ ರಾಜೂ ಗೌಡ, ಆಳಂದ ಕ್ಷೇತ್ರದ ಸುಭಾಷ್ ಗುತ್ತೇದಾರ್‌ ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ತಿಳಿದುಬಂದಿದೆ.

Related Video