Asianet Suvarna News Asianet Suvarna News

'ಸಾವಾಗ್ಲಿಲ್ಲ ಮರ್ರೆ ಪ್ರದೀಪ್, ಕೂತ್ಕೊ ಪ್ರದೀಪ್..' ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ!

ಬಿಜೆಪಿ ಹಾಗೂ ಜೆಡಿಎಸ್‌ ನವರು ಒಂದು ಸಾವಿಗೆ ಇಷ್ಟೆಲ್ಲಾ ಧರಣಿ ಮಾಡ್ತಿದಾರಲ್ಲಾ, ಕೋವಿಡ್‌ ವೇಳೆ ಸಾವಿರಾರು ಸಾವಾದಾಗ ನ್ಯಾಯ ಕೊಡಿ ಎಂದು ಕೇಳೋಕೆ ಆಗಲಿಲ್ಲವಾ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ಬೆಂಗಳೂರು (ಜು.06): ಕರ್ನಾಟಕ ಅಧಿವೇಶನ: ಮಂಡ್ಯ ಜಿಲ್ಲೆಯ ನಾಗಮಂಗಲ ಬಸ್‌ ಡಿಪೋದ ಚಾಕ ಕಂ ಕಂಡಕ್ಟರ್‌ ಜಿಲ್ಲಾ ಉಸ್ತುವಾರಿ ಸಚಿವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡೆತ್‌ನೋಟ್‌ ಆಧರಿಸಿ ಸರ್ಕಾರದಿಂದ ತನಿಖೆ ಕೈಗೊಳ್ಳುವಂತೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಶಾಸಕ ಪ್ರದೀಪ್‌ ಈಶ್ವರ್‌, ಬಿಜೆಪಿ ಹಾಗೂ ಜೆಡಿಎಸ್‌ ನವರು ಒಂದು ಸಾವಿಗೆ ಇಷ್ಟೆಲ್ಲಾ ಧರಣಿ ಮಾಡ್ತಿದಾರಲ್ಲಾ, ಕೋವಿಡ್‌ ವೇಳೆ ಇಷ್ಟೆಲ್ಲಾ ಸಾವಾದಾಗ ನ್ಯಾಯ ಕೊಡಿ ಎಂದು ಕೇಳೋಕೆ ಆಗಲಿಲ್ಲವಾ ಎಂದು ಕೇಳಿದರು. ಈ ವೇಳೆ  ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು 'ಸಾವಾಗ್ಲಿಲ್ಲ ಮಾರೆ ಪ್ರದೀಪ್, ಕೂತ್ಕೊ ಪ್ರದೀಪ್...' ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ ಹೇಳಿದರು.