ವಕೀಲೆ ಎಂದು ಹೇಳಿ ಸಚಿವ ಕೆಎನ್ ರಾಜಣ್ಣ ಹನಿಟ್ರ್ಯಾಪ್‌ಗೆ ಯತ್ನ
ಹನಿಟ್ರ್ಯಾಪ್ ಹೇಗೆ ಆಗುತ್ತೆ? ಡಿಕೆ ಶಿವಕುಮಾರ್ ಬೀಸಿದ ಚಾಟಿ, ಕಾಂಗ್ರೆಸ್ ವಿರುದ್ದ ಬಿಜೆಪಿ ಆಕ್ರೋಶ, ಹನಿಟ್ರ್ಯಾಪ್ ತನಿಖೆಗೆ ಆಗ್ರಹ, ಬಿಜೆಪಿ 18 ಶಾಸಕರು ಅಮಾನತು,ನಿರ್ಧಾರ ಸರಿ ಎಂದ ಕಾಂಗ್ರೆಸ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕರ್ನಾಟಕದಲ್ಲಿ ಹನಿಟ್ರ್ಯಾಪ್ ಭಾರಿ ಕೋಲಾಹಲ ಸೃಷ್ಟಿಸಿದೆ. ಸಚಿವ ಕೆಎನ್ ರಾಜಣ್ಣ ಸದನದಲ್ಲಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನಗಳು ನಡೆದಿದೆ ಎಂದಿದ್ದಾರೆ. ಇತ್ತ ಬಿಜೆಪಿ ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಒತ್ತಾಯಿಸಿದೆ. ಇದರ ನಡುವೆ 18 ಬಿಜೆಪಿ ಶಾಸಕರೂ ಅಮಾನತ್ತಾಗಿದ್ದಾರೆ. ಇದೀಗ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿದ ಮಾಹಿತಿಗಳು ಬಹಿರಂಗವಾಗಿದೆ. ವಕೀಲೆ ಎಂದು ಹೇಳಿ ಕೆಎನ್ ರಾಜಣ್ಣ ಅವರನ್ನು ಯುವತಿಯೊಬ್ಬಳು ಸತತವಾಗಿ ಹಿಂಬಾಸಿದ್ದಾಳೆ. ಮೂರು ಭಾರಿ ಭೇಟಿಗೆ ಪ್ರಯತ್ನಿಸಿದ ಘಟನೆಯೂ ಬಹಿರಂಗವಾಗಿದೆ.