ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯದವರ ಮನೆಗೆ ಅಶೋಕ್ ಭೇಟಿ
ಗ್ರಾಮ ವಾಸ್ತವ್ಯದ ಭಾಗವಾಗಿ ಕುಡುಬಿ, ಕೊರಗ ಜನಾಂಗದವರ ಪ್ರದೇಶಗಳಿಗೆ ಭೇಟಿ ನೀಡಿ ಉಪಹಾರ ಸೇವಿಸಿದರು. ಅಲ್ಲದೇ ಅವರು ಕುಂದುಕೊರತೆ ಆಲಿಸಿದರು. ಕೊರಗ ಕರಾವಳಿಯ ಅತ್ಯಂತ ಮುಗ್ಧ ಸಮುದಾಯ ಹಾಗೂ ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯ. ಇದೀಗ ಅವರನ್ನ ಭೇಟಿ ಮಾಡಿ ಅಶೋಕ್ ಅಸ್ಪೃಶ್ಯತೆ ಹೋಗಲಾಡಿಸಲು ಈ ಭೇಟಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಡುಪಿ, (ಫೆ.20) : ಜನರ ಬಳಿಗೆ ಸರ್ಕಾರವೇ ತೆರಳಿ ಸಮಸ್ಯೆ ಆಲಿಸಬೇಕು ಎನ್ನುವುದು “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಉದ್ದೇಶ, ಅದರಂತೆ ಕಂದಾಯ ಸಚಿವ ಆರ್ ಅಶೋಕ್ ಉಡುಪಿ ಜಿಲ್ಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಆರೂರು, ಕೊಕ್ಕರ್ಣೆಯಲ್ಲಿರುವ ಆರೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂತ್ರಿ ಆರ್ ಅಶೋಕ್ ಗ್ರಾಮ ವಾಸ್ತವ್ಯ ಮಾಡಿದರು.
ಗ್ರಾಮ ವಾಸ್ತವ್ಯ ವೇಳೆ ವಸತಿ ಶಾಲೆ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಅಶೋಕ್ ಭಾಗಿ