'ಡಿಸಿ ನಡೆ..ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ 'ನಾವಿರುವುದೇ ನಿಮಗಾಗಿ... ಹಾಡು ಹೇಳಿದ ಡಾ. ಸುಧಾಕರ್..!

ಗೌರಿಬಿದನೂರು ತಾಲೂಕು ಪುರ ಗ್ರಾಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೇರಿದಂತೆ ಇಡೀ ಜಿಲ್ಲಾಡಳಿತ ಶನಿವಾರ ವಾಸ್ತವ್ಯ ಹೂಡಿತ್ತು. ಇದರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 
 

First Published Nov 7, 2021, 1:55 PM IST | Last Updated Nov 7, 2021, 1:57 PM IST

ಚಿಕ್ಕಬಳ್ಳಾಪುರ (ನ. 07):  ಗೌರಿಬಿದನೂರು (Gowri Bidanoor) ತಾಲೂಕು ಪುರ ಗ್ರಾಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ (Dr. K Sudhakar) ಸೇರಿದಂತೆ ಇಡೀ ಜಿಲ್ಲಾಡಳಿತ ಶನಿವಾರ ವಾಸ್ತವ್ಯ ಹೂಡಿತ್ತು. ಇದರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 

BJP Core Committe Meeting: ಸಿಎಂ ಬೊಮ್ಮಾಯಿ ಜೊತೆ RSS ಮುಖಂಡ ಮುಕುಂದ್ ಮಹತ್ವದ ಚರ್ಚೆ

ಸುಮಾರು 40 ಮಂದಿಗೆ ಸಾಗುವಳಿ ಚೀಟಿ, 215 ಮಂದಿಗೆ ಪಿಂಚಣಿ ಆದೇಶ ಪ್ರತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭವನ್ನು ವಿತರಿಸಿದರು. ಸರ್ಕಾರ ಸೌಲಭ್ಯ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದು, ಸಮಸ್ಯೆ ಆಲಿಸಿ, ಸ್ಥಳದಲ್ಲೇ ಪರಿಹಾರಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮದ ಜನ ಪಾಲ್ಗೊಂಡಿದ್ದರು.

ಸಚಿವರಿಗೆ ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಗೌಡ ನಿವಾಸ, ಜಿಲ್ಲಾಧಿಕಾರಿ ಆರ್‌.ಲತಾ, ಡಿಎಚ್‌ಒ ಮತ್ತಿತರ ಮಹಿಳಾ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಕಟ್ಟಡ, ಸಿಇಒ, ಎಸ್ಪಿ ಇನ್ನಿತರರಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಸುಧಾಕರ್, ರಾಜ್‌ಕುಮಾರ್ ಅವರ, 'ನಾವಿರುವುದೇ ನಿಮಗಾಗಿ.... ಹಾಡು ಹೇಳಿ ರಂಜಿಸಿದರು.