Covid-19: ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಶಾಸಕರ ವರ್ತನೆ ಸಮರ್ಥಿಸಿಕೊಂಡ ಅಶ್ವಥ್ ನಾರಾಯಣ್!

ಬಿಜೆಪಿ ನಾಯಕ ಎನ್ ಆರ್ ರಮೇಶ್ ಬರ್ತಡೇ
ಚಾಮರಾಜಪೇಟೆಯಲ್ಲಿಅದ್ದೂರಿಯಾಗಿ ನಡೆದ ಸಮಾರಂಭ
ಕೋವಿಡ್ ನಿಯಮ ಉಲ್ಲಂಘನೆ ಆದ್ರೂ ಸಮರ್ಥನೆ ಮಾಡಿಕೊಂಡ ಸಚಿವ ಅಶ್ವಥ್ ನಾರಾಯಣ್

Share this Video
  • FB
  • Linkdin
  • Whatsapp

ಬೆಂಗಳೂರು (ಜ. 16): ರಾಜ್ಯದಲ್ಲಿ ಹಳ್ಳಿ ಹಳ್ಳಿಗೂ ಕರೋನೋ ವ್ಯಾಪಿಸ್ತಾ ಇದೆ. ದಿನದಿಂದ ದಿನಕ್ಕೆ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿರುವ ನಡುವೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಆದೇಶ ನಿಡಿದೆ. ಆದರೆ ಬಿಜೆಪಿ ಶಾಸಕರುಗಳು (BJP MLAs) ಕೋವಿಡ್ ಸಮಯದಲ್ಲಿ (Covid-19) ಅದ್ದೂರಿಯಾಗಿ ಜನ್ಮದಿನ ಆಚರಿಸುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದನ್ನು ಸಚಿವ ಅಶ್ವಥ್ ನಾರಾಯಣ್ (Minister Dr Ashwath Narayan) ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ. ಒಂದೆಡೆ ಜನ ಆತಂಕದಲ್ಲಿದ್ದರೆ, ನಾಯಕರು ಮೋಜು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

Birthday Celebration ಡೆಡ್ಲಿ ಕೊರೋನಾದಿಂದ ಜನ ಸಾಯ್ತಿದ್ರೆ, ಬಿಜೆಪಿ ಶಾಸಕನಿಗೆ ಹುಟ್ಟುಹಬ್ಬದ ಸಂಭ್ರಮ
ವೀಕೆಂಡ್ ಕರ್ಫ್ಯೂ ಇದ್ದರೂ, ಚಾಮರಾಜಪೇಟೆಯಲ್ಲಿ ಬಿಜೆಪಿ ನಾಯಕ ಎನ್.ಆರ್. ರಮೇಶ್ ಸೇರಿದಂತೆ ನಾಲ್ವರು ಬಿಜೆಪಿ ನಾಯಕರಿಂದ ರಾಜ್ಯಾದ್ಯಂತ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ ನಾರಾಯಣ್, ಫೋಟೋ ತೆಗೆಸಿಕೊಳ್ಳುವಾಗ ಮಾಸ್ಕ್ ಅನ್ನು ತೆಗೆದಿದ್ದಾರೆ. ಅದಕ್ಕೆ ಅವಕಾಶವೂ ಇದೆ' ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ನಾಯಕರ ಯಡವಟ್ಟನ್ನು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

Related Video