ಫೈನಾನ್ಸ್ ಕಿರುಕುಳಕ್ಕೆ ಊರೇ ಬಿಟ್ಟ ಗ್ರಾಮಸ್ಥರು,ಗೃಹಲಕ್ಷ್ಮಿಯರ ವೇದನೆಗೆ ಮುಕ್ತಿ ಯಾವಾಗ?

ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲಿ ಫೈನಾನ್ಸ್ ಸಾಲದಿಂದ ಊರು ಬಿಡುತ್ತಿದ್ದಾರೆ. ಹಲವರು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಇದೀಯಾ ರಾಜಕೀಯ ಬಲ?
 

Chethan Kumar  | Published: Jan 25, 2025, 10:47 AM IST

ಬೆಂಗಳೂರು(ಜ.25) ಮೀಟರ್ ಬಡ್ಡಿಗಿಂತಲು ಜೋರಾಗಿ ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಬಡ್ಡಿ ದಂಧೆ ನಡೆಯುತ್ತಿದೆ. ಈಗಾಗಲೇ ಹಲವು ಜೀವಗಳು ಬಲಿಯಾಗಿದೆ. ಆದರೆ ಇವೆಲ್ಲಾ ಗೊತ್ತಿದ್ದರೂ ಪೊಲೀಸ್ ಇಲಾಖೆ ಸುಮ್ಮನಿದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಫೈನಾನ್ಸ್ ಕಿರುಕುಳಕ್ಕೆ ಹಲವರು ಊರು ಬಿಟ್ಟಿದ್ದಾರೆ. ಸರ್ಕಾರದ ನಿಯಮ ಪಾಲಿಸದೆ ಅಮಾಯಕರಿಂದ ಬಡ್ಡಿ ಕಿತ್ತುಕೊಳ್ಳುತ್ತಿರುವ ಈ ದಂಧೆ ಕೋರರ ವಿರುದ್ದ ಕ್ರಮ ಆಗುತ್ತಿಲ್ಲ. ಈ ಭಾಗ್ಯಲಕ್ಷ್ಮಿಯ ಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸುತ್ತಾರಾ?