
ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೀತಿದೆಯಂತೆ; ಎಂಇಎಸ್ ಮುಖಂಡರಿಂದ ಪತ್ರ!
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣವನ್ನು ಎಂಇಎಸ್ ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. ಕಂಡಕ್ಟರ್ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದನ್ನು ಮರೆಮಾಚಲು ಭಾಷಾ ವಿವಾದದ ಬಣ್ಣ ಬಳಿಯಲಾಗುತ್ತಿದೆ.
ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ವನ್ನು ಜೀವಂತವಾಗಿಡಲು ಎಂಇಎಸ್ ಮುಖಂಡರಿಂದ ಪ್ರಯತ್ನ ನಡೀತಿದೆ. ಕಂಡಕ್ಟರ್ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದು, ಅದನ್ನ ಮರೆಮಾಚಲು ಪ್ರಕರಣಕ್ಕೆ ಭಾಷಾ ವಿವಾದದ ಬಣ್ಣ ಬಳಿಯಲಾಗಿದೆ. ಬೆಳಗಾವಿಯಲ್ಲಿ ಪರಾಠಿಗಳ ಮೇಲೆ ದೌರ್ಜನ್ಯ ನಡೀತಿದೆ ಎಂದು ಎಂಇಎಸ್ ನಾಯಕರು ಶಿವಸೇನೆ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಭಾಷೆ ವಿಚಾರಕ್ಕೆ ಗಲಾಟೆ ಆಗಿರುವುದನ್ನು ಎಂಇಎಸ್ ಮುಖಂಡರು ಜೀವಂತವಾಗಿ ಇಡುವುದಕ್ಕೆ ಹಲವು ಕಸರತ್ತುಗಳನ್ನು ಮಾಡುತ್ತಿದೆ. ಈ ಬಗ್ಗೆ ಎಂಇಎಸ್ ಮುಖಂಡ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಪತ್ರದ ಮೂಲಕ ದೂರು ನೀಡಿದ್ದಾರೆ. ಜೊತೆಗೆ, ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಕನ್ನಡಿಗರು ಭಾರೀ ದೌರ್ಜನ್ಯವನ್ನು ಮಾಡುತ್ತಿವೆ ಎಂದು ಹೇಳಿದ್ದಾರೆ. ಜೊತೆಗೆ, ಮರಾಠಿ ಮಾತನಾಡುವ ಬಾಲಕಿ ಮೇಲೆ ಕಂಡಕ್ಟರ್ ಅನುಚಿತವಾಗಿ ನಡೆದುಕೊಂಡು, ಅದನ್ನು ಮುಚ್ಚಿ ಹಾಕಲು ಭಾಷೆಯನ್ನು ಎತ್ತಿಕಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಮೂಲಕ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಗಡಿ ವಿವಾದವನ್ನು ಇಟ್ಟುಕೊಂಡು ಶಿವಸೇನೆ ಹಾಗೂ ಎಂಇಎಸ್ ಮಹಾರಾಷ್ಟ್ರದಲ್ಲಿ ರಾಜಕಾರಣ ಮಾಡುತ್ತಿವೆ. ಇದೀಗ ಕಂಡಕ್ಟರ್ ಪ್ರಕರಣವನ್ನು ಜೀವಂತವಾಗಿ ಇಟ್ಟು ಹೋರಾಟ ಮುಂದುವರೆಸಲು ಮುಂದಾಗಿವೆ. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಯುವತಿ ಹಾಗೂ ಅವರ ಮನೆಯವರೇ ದೂರನ್ನು ವಾಪಸ್ ಪಡೆದುಕೊಂಡಿದ್ದು ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಆದರೂ, ಈ ಪ್ರಕರಣ ಜೀವಂತವಾಗಿ ಇಟ್ಟುಕೊಂಡು ಸ್ಥಳೀಯ ಪಂಚಾಯತ್ ಚುನಾವಣೆ ರಾಜಕಾರಣ ಮಾಡಲು ಮುಂದಾಗಿವೆ ಎಂದು ತಿಳಿದುಬಂದಿದೆ.