Asianet Suvarna News Asianet Suvarna News

ಮೈಸೂರಿಗೆ ಸಿಎಂ ಬಂದಾಗ ಯಾಕೆ ಭೇಟಿಯಾಗಿಲ್ಲ; ಮುಚ್ಚಿದ ಲಕೋಟೆಯಲ್ಲಿ ಉತ್ತರ ಕೊಟ್ಟ ರಾಮದಾಸ್!

Aug 14, 2021, 3:15 PM IST

ಬೆಂಗಳೂರು (ಆ. 14): ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತರ ಅಸಮಾಧಾನ ಮುಂದಿವರೆದಿದೆ. ಇಂದು ಸಿಪಿ ಯೋಗೇಶ್ವರ್ ಹಾಗೂ ರಾಮದಾಸ್ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. 

ರಿಕ್ಷಾ, ಬಸ್ ಚಾಲಕರು ಆಕಸ್ಮಿಕವಾಗಿ ಮೃತಪಟ್ಟರೆ 5 ಲಕ್ಷ ರೂ ಪರಿಹಾರ: ಸಚಿವ ಹೆಬ್ಬಾರ್

'ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗ ಯಾಕೆ ಭೇಟಿಯಾಗಿಲ್ಲ ಎನ್ನುವುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಮುಚ್ಚಿದ ಲಕೋಟೆಯಲ್ಲಿ ಹೇಳುತ್ತೇನೆ ಎಂದಿದ್ದೆ. ಅದರಂತೆ ಇಂದು ಸಿಎಂರನ್ನು ಭೇಟಿಯಾಗಿದ್ದೇನೆ. ಮೈಸೂರಿನಲ್ಲಿ ಕೋವಿಡ್ ಸ್ಥಿತಿಗತಿ, ಕೆಲವು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಇನ್ನು ನನಗೆ ಸಚಿವ ಸ್ಥಾನ ತಪ್ಪಿಸಿದವರಿಗೆ ಒಳ್ಳೆಯದಾಗಲಿ' ಎಂದಿದ್ದಾರೆ.