ಈದ್ಗಾ ಮೈದಾನವನ್ನು ಕಂದಾಯ ಇಲಾಖೆಗೆ ಸೇರಿಸಲಾಗಲ್ಲ: ಶಾಫಿ ಸಅದಿ

ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಬಿಬಿಎಂಪಿ ಕೊನೆಗೂ ತೆರೆ ಎಳೆದಿದೆ. ಸತತ ದಾಖಲೆ ಪರಿಶೀಲನೆ, ಸಭೆ ಬಳಿಕ ಈದ್ಗಾ ಮೈದಾನ ವಕ್ಫ್‌ ಬೋರ್ಡ್‌ ಸ್ವತ್ತು ಅಲ್ಲ, ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ  ಹೇಳಿದೆ.  

First Published Aug 7, 2022, 1:59 PM IST | Last Updated Aug 7, 2022, 1:59 PM IST

ಬೆಂಗಳೂರು (ಆ. 07): ಚಾಮರಾಜಪೇಟೆ ಈದ್ಗಾ ವಿವಾದಕ್ಕೆ ಬಿಬಿಎಂಪಿ ಕೊನೆಗೂ ತೆರೆ ಎಳೆದಿದೆ. ಸತತ ದಾಖಲೆ ಪರಿಶೀಲನೆ, ಸಭೆ ಬಳಿಕ ಈದ್ಗಾ ಮೈದಾನ ವಕ್ಫ್‌ ಬೋರ್ಡ್‌ ಸ್ವತ್ತು ಅಲ್ಲ, ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ  ಹೇಳಿದೆ.  

ನಾವು ಕಂದಾಯ ಇಲಾಖೆಗೆ ಮೈದಾನ ವಿಚಾರ ಹಸ್ತಾಂತರ ಮಾಡಿದ್ದೇವೆ ಅಂತ ಬಿಬಿಎಂಪಿ ಹೇಳೋ ಹಾಗಿಲ್ಲ, ಯಾಕಂದ್ರೆ ಈ ಮೈದಾನ ಬಿಬಿಎಂಪಿಯವರ ವ್ಯಾಪ್ತಿಯಲ್ಲಿಯೇ ಇಲ್ಲ. ಕಂದಾಯ ಇಲಾಖೆಗೆ ಸೇರಿಸುವ ಹಕ್ಕೂ ಇಲ್ಲ. ಸುಪ್ರೀಂ ಕೋರ್ಟ್​ ಈಗಾಗಲೇ ಸ್ಪಷ್ಟವಾಗಿ ಹೇಳಿದೆ ಇದು ವಖ್ಫ್​ ಬೋರ್ಡ್​ ಆಸ್ತಿ ಅಂತ. ನಾವು ಕಾನೂನು ತಜ್ಞರ ಜೊತೆ ಚರ್ಚಿಸಿದ್ದೇವೆ. ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ ಅದಿ ಹೇಳಿದ್ದಾರೆ.