ಮಂಗಳೂರು ಗಲಭೆ: ಪೊಲೀಸ್ರು ಆಸ್ಪತ್ರೆಗೆ ನುಗ್ಗಿದ ಹಿಂದಿನ ಅಸಲಿ ಕಾರಣ ಬಟಾಬಯಲು

ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಕ್ಷಣ-ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭ ಪೊಲೀಸರು ಆಸ್ಪತ್ರೆಗೆ ಪ್ರವೇಶಿಸಿರುವ  ಬಗ್ಗೆ ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ಮಂಗಳೂರು, (ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಕ್ಷಣ-ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ಸಂದರ್ಭ ಪೊಲೀಸರು ಗನ್ ಹಿಡಿದು ಆಸ್ಪತ್ರೆಗೆ ಪ್ರವೇಶಿಸಿರುವ ಬಗ್ಗೆ ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಮಂಗಳೂರು ಪೊಲೀಸರ ನಡೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದುವು, ಅಷ್ಟೇ ಅಲ್ಲದೇ ಆಸ್ಪತ್ರೆಗೆ ನುಗ್ಗಿರುವ ಪೊಲೀಸರಿಗೆ ಮಾನವೀಯತೆ ಇಲ್ಲವೇ ಅಂತೆಲ್ಲ ಬಾಯಿಗೆ ಬಂದಂತೆ ಬೈದಿದ್ದರು. ಆದ್ರೆ, ಇದೀಗ ಪೊಲೀಸರು ಆಸ್ಪತ್ರೆಗೆ ನುಗ್ಗಿದ್ಯಾಕೆ..? ಎನ್ನುವ ಬಗ್ಗೆ ಅಸಲಿ ಕಾರಣ ಬಟಾಬಯಲಾಗಿದೆ. ಹಾಗಾದ್ರೆ, ಪೊಲೀಸರು ಗನ್, ಲಾಠಿ ಹಿಡಿದು ಆಸ್ಪತ್ರೆಗೆ ನುಗ್ಗಿದ್ಯಾಕೆ..? ವಿಡಿಯೋನಲ್ಲಿದೆ ನೋಡಿ ಅಸಲಿ ಕಾರಣ...

Related Video