BIG 3: ಅಂಬರೀಶ್ ಕನಸು ನನಸು, ಮಂಡ್ಯದಲ್ಲಿ 632 ಮನೆ ಹಂಚಿಕೆ, ಹಾಲಹಳ್ಳಿಯಲ್ಲಿ ಸಂಭ್ರಮ!
ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತೋದು ಬಿಗ್ 3. ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕೊಡಿಸಿದೆ. 2014 ರಲ್ಲಿ ದಿವಂಗತ ಅಂಬರೀಶ್ ವಸತಿ ಸಚಿವರಾಗಿದ್ದಾಗ, ಮಂಡ್ಯ ಜಿಲ್ಲೆಯ ಹಾಲಹಳ್ಳಿಯಲ್ಲಿ 712 ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಸ್ಲಂ ನಿವಾಸಿಗಳಿಗೆ ಸೂರು ನಿರ್ಮಾಣ ಮಾಡುವ ಕನಸು ಕಂಡಿದ್ದರು ಅಂಬರೀಶ್. ಆದರೆ ಪ್ರಾಜೆಕ್ಟ್ ಕುಂಟುತ್ತಾ ಸಾಗಿತ್ತು.

712 ಮನೆಗಳ 632 ಮನೆಗಳು ನಿರ್ಮಾಣ ಆಗಿ ಮೂರ್ನಾಲ್ಕು ವರ್ಷಗಳು ಕಳೆದರೂ ಮನೆ ಹಂಚಿಕೆಯಾಗಿರಲಿಲ್ಲ. ಜನಪ್ರತಿನಿಧಿಗಳಲ್ಲಿದ್ದ ನೀನಾ ನಾನಾ ಕ್ರೆಡಿಟ್ ವಾರ್‌ನಿಂದ ಮನೆಗಳಿಗೆ ಹಂಚಿಕೆ ಭಾಗ್ಯ ಸಿಕ್ಕಿರಲಿಲ್ಲ. ಸೂರಿಲ್ಲದೇ ಕೊಳಗೇರಿಯಲ್ಲಿ ಜನರು ಪರದಾಡುತ್ತಿದ್ದರು. ಈ ಬಗ್ಗೆ ಬಗ್ 3 ವರದಿ ಪ್ರಸಾರ ಮಾಡಿತು. ವರದಿ ಬಳಿಕ ಮಂಡ್ಯ ಜಿಲ್ಲಾಡಳಿತ ಅಲರ್ಟ್ ಆಗಿದೆ. ಫಲಾನುಭವಿಗಳ ಅಂತಿಮ ಪಟ್ಟಿ ತಯಾರಿಸಲು ಡೀಸಿ ಸೂಚಿಸಿದರು. ಅಂತಿಮವಾಗಿ ವಸತಿ ಸಚಿವ ವಿ ಸೋಮಣ್ಣ, ಮಂಡ್ಯ ಸಂಸದೆ ಸುಮಲತಾ ಬಂದು ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದರು.