Mandya: ಸಕ್ಕರೆ ನಾಡಿನಲ್ಲಿ ಕೊರೋನಾ ಅಬ್ಬರ, ಓಂ ಶಕ್ತಿ ಯಾತ್ರೆಗೆ ಹೋಗಿದ್ದ 30 ಮಂದಿಗೆ ಪಾಸಿಟಿವ್
ಸಕ್ಕರೆ ನಾಡಿನಲ್ಲಿ (Mandya)ಕೊರೋನಾ ಅಬ್ಬರ (Covid 19) ಜೋರಾಗಿದೆ. ತಮಿಳುನಾಡಿನ (Tamilnadu) ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡ 30 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಒಮಿಕ್ರಾನ್ (Omicron) ಟೆಸ್ಟ್‌ಗೆ ಕೊರೊನಾ ಸೋಂಕಿತರ ಮಾದರಿ ರವಾನೆ ಮಾಡಲಾಗಿದೆ.
ಮಂಡ್ಯ (ಜ. 04): ಸಕ್ಕರೆ ನಾಡಿನಲ್ಲಿ (Mandya)ಕೊರೋನಾ ಅಬ್ಬರ (Covid 19) ಜೋರಾಗಿದೆ. ತಮಿಳುನಾಡಿನ (Tamilnadu) ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡ 30 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಒಮಿಕ್ರಾನ್ (Omicron) ಟೆಸ್ಟ್‌ಗೆ ಕೊರೊನಾ ಸೋಂಕಿತರ ಮಾದರಿ ರವಾನೆ ಮಾಡಲಾಗಿದೆ.
ಸೋಂಕಿತರಿಗೆ ಹೋಂ ಐಸೋಲೇಷನ್ (Home Isolation) ನೀಡದೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ. ಶ್ರೀರಂಗಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಿದೆ.
ಕಳೆದ ವಾರ ಶ್ರೀರಂಗಪಟ್ಟಣದ ವಿವಿಧ ಹಳ್ಳಿಗಳಿಂದ ದೇವಾಲಯಕ್ಕೆ 6 ಬಸ್‌ಗಳಲ್ಲಿ ಭಕ್ತರು ತೆರಳಿದ್ದರು. ಇವರಲ್ಲಿ 30 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ವಾಪಸ್ಸಾದವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ ಎಂದು ಶ್ರೀರಂಗಪಟ್ಟಣ ಟಿಎಚ್‌ಓ ಡಾ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.