ಬೈಕ್ ನಲ್ಲಿ ಹಿಂಬದಿ ಸವಾರರ ನಿರ್ಬಂಧ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಮಾತ್ರ: ಅಲೋಕ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯಿಂದಾಗ ಅಭದ್ರತೆ, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹೊಸ ನಿಯಮ ಜಾರಿಯಾಗಿದ್ದು, ನಾಳೆಯಿಂದ (ಆ. 05): ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ

First Published Aug 4, 2022, 5:15 PM IST | Last Updated Aug 4, 2022, 5:15 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಯಿಂದಾಗ ಅಭದ್ರತೆ, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹೊಸ ನಿಯಮ ಜಾರಿಯಾಗಿದ್ದು, ನಾಳೆಯಿಂದ (ಆ. 05): ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. 

ಈ ಬಗ್ಗೆ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದು, ಈ ನಿಯಮ ರಾತ್ರಿ ಹೊತ್ತು ಮಾತ್ರ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರ ಈ ನಿರ್ಬಂಧ ಆದೇಶ ಮಾಡಲಾಗಿದ್ದು, ಇದು ಪೂರ್ತಿ ದಿನ ಆದೇಶ ಇರಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಇಲ್ಲ. ಪ್ರಕರಣಗಳು ಸಂಜೆ ವೇಳೆ ನಡೆಯುವ ಕಾರಣ ಬ್ರೇಕ್ ಮಾಡಲು ಈ ಆದೇಶ ಮಾಡಲಾಗಿದೆ. 

ಪರಿಸ್ಥಿತಿ ಶಾಂತವಾಗಿಲ್ಲದ ಕಾರಣ ಈ ರೀತಿ ಮಾಡಿದ್ದೇವೆ. ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರಬಾರದು. ಸದ್ಯ ಒಂದು ವಾರದ ಮಟ್ಟಿಗೆ ಈ ಆದೇಶ ಜಾರಿಯಲ್ಲಿ ಇರಲಿದೆ. ರಾತ್ರಿ ವೇಳೆ ದಾಳಿ ಮಾಡುವುದನ್ನು ನಿಯಂತ್ರಿಸಲು ಇದನ್ನ ಜಾರಿ ಮಾಡಿದ್ದೇವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಇದರಿಂದ ಸಮಸ್ಯೆ ಇಲ್ಲ' ಎಂದು ಅಲೋಕ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 

Video Top Stories