ನವೆಂಬರ್‌ನಲ್ಲಿ ಜೋರಾಗಲಿದೆಯಂತೆ ಕೊರೊನಾ ಸುನಾಮಿ; ಶ್ವಾಸಕೋಶ ತಜ್ಞರ ಅಭಿಪ್ರಾಯವಿದು!

ನವೆಂಬರ್‌ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೋನಾ ವೈರಸ್‌ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡ ವರದಿ ನೀಡಿದೆ. ದೇಶದಲ್ಲಿ ಈಗಾಗಲೇ ನಿತ್ಯ ಸರಾಸರಿ 10 ಸಾವಿರ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ವೈರಸ್‌ ಹಾವಳಿ ಇನ್ನಷ್ಟುಹೆಚ್ಚಾಗಲಿದೆ, ನವೆಂಬರ್‌ವರೆಗೂ ಮುಂದುವರಿಯಲಿದೆ ಎಂಬ ಸಾರ ಇರುವ ಈ ವರದಿ ಆತಂಕ ಹೆಚ್ಚಲು ಕಾರಣವಾಗಿದೆ.

First Published Jun 15, 2020, 1:22 PM IST | Last Updated Jun 15, 2020, 1:22 PM IST

ಬೆಂಗಳೂರು (ಜೂ. 15): ನವೆಂಬರ್‌ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೋನಾ ವೈರಸ್‌ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡ ವರದಿ ನೀಡಿದೆ. ದೇಶದಲ್ಲಿ ಈಗಾಗಲೇ ನಿತ್ಯ ಸರಾಸರಿ 10 ಸಾವಿರ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ವೈರಸ್‌ ಹಾವಳಿ ಇನ್ನಷ್ಟುಹೆಚ್ಚಾಗಲಿದೆ, ನವೆಂಬರ್‌ವರೆಗೂ ಮುಂದುವರಿಯಲಿದೆ ಎಂಬ ಸಾರ ಇರುವ ಈ ವರದಿ ಆತಂಕ ಹೆಚ್ಚಲು ಕಾರಣವಾಗಿದೆ.

ಕೊರೋನಾ ವೈರಸ್‌ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಲಾಕ್‌ಡೌನ್‌ ಹಾಗೂ ಆರೋಗ್ಯ ವ್ಯವಸ್ಥೆ ಬಲಪಡಿಸುವ ಕ್ರಮಗಳಿಂದಾಗಿ ಕೊರೋನಾ ತನ್ನ ಗರಿಷ್ಠ ಮಟ್ಟಕ್ಕೆ ತಲುಪುವುದು ವಿಳಂಬವಾಗಿದೆ. ಆದರೆ ಆ ಸನ್ನಿವೇಶ ನವೆಂಬರ್‌ ಮಧ್ಯಭಾಗದ ವೇಳೆಗೆ ಬರಲಿದೆ.

ಆಗ ಐಸೋಲೇಷನ್‌ ಮತ್ತು ಐಸಿಯು ಬೆಡ್‌ಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿ ಬಾಧಿಸುವ ಸಂಭವವಿದೆ ಎಂದು ವರದಿ  ಹೇಳಿದೆ.  ಈ ಬಗ್ಗೆ ಶ್ವಾಸಕೋಶ ತಜ್ಞರಾದ ಡಾ. ವಿವೇಕ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ
 

Video Top Stories