
ಲವ್ ಜಿಹಾದ್‌ಗೆ ಪ್ರತಿಯಾಗಿ ಶ್ರೀರಾಮ ಸೇನೆಯಿಂದ ಲವ್ ಕೇಸರಿ!
ಶ್ರೀರಾಮಸೇನೆಯಿಂದ ವಿವಾದಾತ್ಮಕ ಕ್ರಮ
ಲವ್ ಜಿಹಾದ್ ಪ್ರತಿಯಾಗಿ ಲವ್ ಕೇಸರಿ
ಪ್ರತಿ ಕಾರ್ಯಕರ್ತ ಕೂಡ ಲವ್ ಕೇಸರಿ ಮಾಡಬೇಕು
ಬೆಂಗಳೂರು (ಏ.11): ಶ್ರೀರಾಮನವಮಿ (Sri Rama Navami) ಹಿನ್ನಲೆಯಲ್ಲಿ ರಾಯಚೂರಿನಲ್ಲಿ (Raichur) ನಡೆದ ಕಾರ್ಯಕ್ರಮದಲ್ಲಿ ಲವ್ ಜಿಹಾದ್ (Love Jihad) ಬದಲಿಗೆ ಲವ್ ಕೇಸರಿ (Love Kesari) ಎನ್ನುವ ಟ್ರೆಂಡ್ ಸೃಷ್ಟಿಯಾಗಬೇಕು ಎಂದು ಶ್ರೀರಾಮಸೇನೆ ಕರೆ ನೀಡಿದೆ. "ಹೆಣ್ಣು ಮಕ್ಕಳನ್ನು ಮಕ್ಕಳು ಹೆರುವ ಯಂತ್ರ ಎಂದು ಅವರು ಅಂದುಕೊಂಡಿದ್ದಾರೆ. ನಮ್ಮ ಪ್ರತಿ ಕಾರ್ಯಕರ್ತ ಕೂಡ ಲವ್ ಜಿಹಾದ್ ಪ್ರತಿಯಾಗಿ ಲವ್ ಕೇಸರಿ ಮಾಡಲು ಮುಂದಾಗಬೇಕು' ಎಂದು ಕರೆ ನೀಡಿದ್ದಾರೆ.
ರಾಯಚೂರಿನಲ್ಲಿ ಒಂದೇ ಒಂದು ಲವ್ ಜಿಹಾದ್ ಪ್ರಕರಣ ಬರಬಾರದು. ಲವ್ ಕೇಸರಿ ಮಾಡಿ ನಿಮ್ಮ ಹಿಂದೆ ಶ್ರೀರಾಮಸೇನೆ ಸಂಘಟನೆ ಇದೆ. ಮುಸ್ಲಿಂ ಹೆಣ್ಣು ಮಕ್ಕಳಿಗೂ ಕೇಸರಿ ಶಾಲನ್ನೇ ಹಾಕ್ತೇವೆ ಎಂದು ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಹೇಳಿದ್ದಾರೆ.
ಬಾಯಿ ತಪ್ಪಿ ಕಾಂಗ್ರೆಸ್ ವಿರುದ್ಧವೇ ಸಿದ್ದರಾಮಯ್ಯ ವಾಗ್ದಾಳಿ
ನಮ್ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ, ಈ ರಾಯಚೂರು ಬಿಸಿಲಿನಲ್ಲಿ ಕಪ್ಪು ಬುರ್ಖಾ ಹಾಕಿ ತಿರುಗಾಡುವಂತೆ ಮಾಡುತ್ತಾರೆ. ಇವೆಲ್ಲವನ್ನು ನೋಡಿಕೊಂಡು ನಾವು ಸುಮ್ಮನೇ ಕೂರಬೇಕಾ? ಎಂದು ರಾಜಾಚಂದ್ರ ಪ್ರಶ್ನೆ ಮಾಡಿದ್ದಾರೆ.