ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಿ, ಮನೋರಂಜನ್‌ ತಂದೆ ದೇವರಾಜೇಗೌಡ ಆಕ್ರೋಶ

ಲೋಕಸಭೆಯ ಭದ್ರತಾ ಲೋಪ ಎಸೆಗಿ ಸದನದೊಳಗೆ ನುಗ್ಗಿ ಸ್ಮೋಕ್‌ ಎಸೆದ ಆರೋಪಿಗಳಲ್ಲಿ ಒಬ್ಬರಾಗಿರುವ ಮೈಸೂರಿನ ಮನೋರಂಜನ್‌ ಅವರ ತಂದೆ ತನ್ನ ಪುತ್ರನನ್ನು ಗಲ್ಲಿಗೇರಿಸುವಂತೆ ಕೇಳಿಕೊಂಡಿದ್ದಾರೆ.
 

First Published Dec 13, 2023, 7:11 PM IST | Last Updated Dec 13, 2023, 7:11 PM IST

ಬೆಂಗಳೂರು (ಡಿ.13): ನನ್ನ ಮಗ ಮಾಡಿದ್ದು ತಪ್ಪು. ಯಾರೊಬ್ಬರೂ ಕೂಡ ಈ ರೀತಿಯಲ್ಲಿ ಆತಂಕ ಸೃಷ್ಟಿಸಬಾರದು ಎಂದು ಲೋಕಸಭೆಗೆ ನುಗ್ಗಿ ಸ್ಮೋಕ್‌ ಬಾಂಬ್‌ ಎಸೆದ ಆರೋಪಿಗಳಲ್ಲಿ ಒಬ್ಬರಾಗಿರುವ ಮೈಸೂರು ಮೂಲದ ಮನೋರಂಜನ್‌ ಅವರ ತಂದೆ ದೇವರಾಜೇಗೌಡ ಹೇಳಿದ್ದಾರೆ.

"ನನ್ನ ಮಗ ಏನಾದರೂ ಒಳ್ಳೆಯದನ್ನು ಮಾಡಿದ್ದರೆ, ನಾನು ಅವನನ್ನು ಬೆಂಬಲಿಸುತ್ತೇನೆ, ಆದರೆ ಅವನು ಏನಾದರೂ ತಪ್ಪು ಮಾಡಿದ್ದರೆ ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಅವನು ಸಮಾಜಕ್ಕೆ ಏನಾದರೂ ತಪ್ಪು ಮಾಡಿದ್ದರೆ ಅವನನ್ನು ಗಲ್ಲಿಗೇರಿಸಲಿ' ಎಂದು ಹೇಳಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಪ್ರತಾಪ್‌ ಸಿಂಹ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ, ಕಾಂಗ್ರೆಸ್‌ ಆಗ್ರಹ

ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿರುವ ಅವರು, ನನ್ನ ಮಗನಿಗೆ ಬಿಇ ಸೀಟ್‌ ಕೊಡಿಸಿದ್ದು ದೇವೇಗೌಡರು. ದೆಹಲಿ-ಬೆಂಗಳೂರು ಅಂತಾ ಓಡಾಡುತ್ತಿದ್ದ. ಆದರೆ, ಈತ ಆಗ ಎಲ್ಲಿಗೆ ಹೋಗಿದ್ದಾನೆ ಎನ್ನುವುದು ತಿಳಿದಿರಲಿಲ್ಲ. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆತ ಯಾಕೆ ಈ ರೀತಿ ಮಾಡಿದ್ದಾನೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.