'ಬೆಳಗ್ಗೆ ಮತ್ತು ಸಂಜೆ ಫ್ರೀ ನೈಂಟಿ ಕೊಡಿ..' ಕುಡುಕರಿಂದ ಸರ್ಕಾರಕ್ಕೆ ಡಿಮಾಂಡ್‌!

ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಮದ್ಯದ ಮೇಲೆ ತೆರಿಗೆ ಏರಿಸಿರುವುದನ್ನು ವಿರೋಧಿಸಿ ಉಡುಪಿಯಲ್ಲಿ ಮಂಗಳವಾರ ಜಿಲ್ಲಾ ನಾಗರಿಕ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ತೆರಿಗೆ ಏರಿಸಿದರೆ, ಉಚಿತವಾಗಿ ನೈಂಟಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಉಡುಪಿ (ಜು.11): 'ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು, ಮದ್ಯದ ಬೆಲೆ ಇಳಿಕೆ ಮಾಡಿ, ಇಲ್ಲದಿದ್ದರೆ ಉಚಿತ ಮದ್ಯ ಕೊಡಿ, ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತ ಕೊಡಿ' ಕುಡುಕರಿಗೆ ಹಾರ ಹಾಕಿ ಸನ್ಮಾನ, ಆರತಿ ಎತ್ತಿ ಗೌರವ, ಮಂಗಳಾರತಿ! ಸರಕಾರ ನಡೆಸುವವರು ನೀವೇ ಎಂದು ಕುಡುಕರಿಗೆ ಗೌರವಾರ್ಪಣೆ! 'ಸಾರಾಯಿಯನ್ನು ಬಂದ್ ಮಾಡಿ, ಆ ಹಣ ನಮ್ಮ ಹೆಂಡ್ತಿಗೆ ಕೊಡ್ತೇವೆ, ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೆವೆ!' ಚಿತ್ತರಂಜನ್ ಸರ್ಕಲ್‌ನಲ್ಲಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ವಿನೂತನ ಪ್ರತಿಭಟನೆ

Related Video