ಭರ್ತಿಯಾದ ಕೆಆರ್ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರದೇಶದಲ್ಲಿರುವವರಿಗೆ ಎಚ್ಚರಿಕೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸುಮಾರು 25ರಿಂದ 75 ಸಾವಿರ ಕ್ಯುಸೆಕ್ವರೆಗೆ ನೀರನ್ನು ಹೊರಬಿಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜ ಸಾಗರಕ್ಕೆ (KRS) ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಅಣೆಕಟ್ಟು 122.60 ಅಡಿ ತುಂಬಿದೆ. ರೈತರಲ್ಲಿ ಸಂತಸ ಮೂಡಿಸಿದೆ. ಸುಮಾರು 25ರಿಂದ 75 ಸಾವಿರ ಕ್ಯುಸೆಕ್ವರೆಗೆ ನೀರನ್ನು ಹೊರಬಿಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
Karnataka Rain:ಗೋಕಾಕ್ ಫಾಲ್ಸ್ ಎದುರು ಪ್ರವಾಸಿಗರ ಸೆಲ್ಪೀ ಹುಚ್ಚಾಟ
ಈಗಾಗಲೇ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡು ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾನುವಾರುಗಳ ರಕ್ಷಣೆಗೆ ಎಚ್ಚರ ವಹಿಸಿ ಮುಂಜಾಗ್ರತಾ ಕ್ರಮದೊಂದಿಗೆ ಸುರಕ್ಷಿತಾ ಸ್ಥಳಗಳಿಗೆ ತೆರಳುವಂತೆ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ಜಲಾಶಯದ ಹೊರ ಹರಿವಿನಲ್ಲಿ ನದಿಗೆ 26,143 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದ್ದರೆ, ವಿಶ್ವೇಶ್ವರಯ್ಯ ನಾಲೆಗೆ 1502 ಕ್ಯುಸೆಕ್, ಎಲ್ಬಿಎಲ್ಎಲ್ ನಾಲೆಗೆ 58 ಕ್ಯುಸೆಕ್ ಹಾಗೂ ಎನ್ಸಿಸಿ ಡಬ್ಲೂ ್ಯ ನಾಲೆಗೆ 50 ಕ್ಯುಸೆಕ್ನೀರನ್ನು ಬಿಡಲಾಗುತ್ತಿದೆ.