ಡಿಕೆಶಿ ಒಡೆತನ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ! ಡಿಕೆಶಿ ಫಸ್ಟ್‌ ರಿಯಾಕ್ಷನ್

ಆಸ್ತಿ ಮೌಲ್ಯಮಾಪನ ಮಾಡಲು ಬಂದಿರುವ ಎರಡು ಸಿಬಿಐ ತಂಡಗಳ ವಿರುದ್ಧ ವಿದ್ಯಾರ್ಥಿಗಳು ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು.

First Published Dec 19, 2022, 6:16 PM IST | Last Updated Dec 19, 2022, 6:16 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಲೀಕತ್ವದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್‌ ಎಜುಕೇಶನ್‌ ಫೌಂಡೇಶನ್‌ ಮೇಲೆ ಸಿಬಿಐ ದಾಳಿ ಮಾಡಿದೆ. ಸಿಬಿಐ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಗ್ಲೋಬಲ್ ಕಾಲೇಜ್ ಜಾಗದ ಬಗ್ಗೆ ಕಾಲೇಜ್ ಸಿಬ್ಬಂದಿ ಮಾಹಿತಿ ಕೇಳಿದ ಸಿಬಿಐ ತಂಡ. ಕೆಲವು ಬ್ಯಾಂಕ್ ದಾಖಲೆ ಪಡೆದು ತೆರಳಿರುವ ಅಧಿಕಾರಿಗಳು. 2020ರಲ್ಲಿ ಸಿಬಿಐ ನಲ್ಲಿ ದಾಖಲಾದ FIR ಸಂಬಂಧ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಆಸ್ತಿ ಮೌಲ್ಯಮಾಪನ ಮಾಡಲು ಬಂದಿರುವ ಎರಡು ಸಿಬಿಐ ತಂಡಗಳ ವಿರುದ್ಧ ವಿದ್ಯಾರ್ಥಿಗಳು ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು. ಈ ರೇಡ್‌ಗೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ಹೀಗಿದೆ ನೋಡಿ..