ಕೋರಮಂಗಲ ಅಪಘಾತ: ಶಾಸಕ ಪ್ರಕಾಶ್ ಭಾವಿ ಸೊಸೆ ಸಾವಿಗೆ ಟ್ವಿಸ್ಟ್!

ಕೋರಮಂಗಲ ಅಪಘಾತ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಶಾಸಕ ಪ್ರಕಾಶ್ ಅವರ ಭಾವಿ ಸೊಸೆ ಕೂಡಾ ಮೃತಪಟ್ಟಿದ್ದಾರೆ. ಆದರೀಗ ಶಾಸಕ ಪ್ರಕಾಶ್ ಭಾವಿ ಸೊಸೆ ಬಿಂದು ಸಾವಿನ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಆ.31): ಕೋರಮಂಗಲ ಅಪಘಾತ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಶಾಸಕ ಪ್ರಕಾಶ್ ಅವರ ಭಾವಿ ಸೊಸೆ ಕೂಡಾ ಮೃತಪಟ್ಟಿದ್ದಾರೆ. ಆದರೀಗ ಶಾಸಕ ಪ್ರಕಾಶ್ ಭಾವಿ ಸೊಸೆ ಬಿಂದು ಸಾವಿನ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಹೌದು ಬಿಂದು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆಕೆ ಬೆಂಗಳೂರಿಗೆ ಯಾವಾಗ ಬಂದಿದ್ದು ಎಂಬ ವಿಚಾರವೇ ಆಕೆಯ ಹೆತ್ತವರಿಗೆ ತಿಳಿದಿಲ್ಲ. ಈ ಬಗ್ಗೆ ಮಾತನಾಡಿರುವ ಬಿಂದು ತಂದೆ ಚಂದ್ರಶೇಖರ್ ನಮ್ಮ ಮಗಳು ರಾತ್ರಿ 8 ಗಂಟೆಗೆ ನಮಗೆ ಫೋನ್ ಮಾಡಿದ್ದಳು. ಚೆನ್ನೈನಲ್ಲಿ ನನಗೆ ಕೆಲಸ ಸಿಕ್ಕಿದೆ ಜಾಯಿನ್ ಆಗಲು ಹೋಗುತ್ತಿದ್ದೀನಿ ಎಂದಿದ್ದಳು. ಆದರೆ ಬೆಂಗಳೂರಿಗೆ ಬಂದಿದ್ದೇ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಇನ್ನು ಬಿಂದು ಹಾಗೂ ಕರುಣಾ ಸಾಗರ್ ಮದುವೆ ಮಾತುಕತೆ ನಡೆದಿತ್ತು. ಆದರೆ ಈ ಮದುವೆಗೆ ನಾವು ಒಪ್ಪಿರಲಿಲ್ಲ. ಆದರೆ ಮಗಳು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಎಂದು ಕಂಬನಿ ಮಿಡಿದಿದ್ದಾರೆ. 

Related Video