ದಲಿತ ಮಗು ದೇಗುಲ ಪ್ರವೇಶ, ಪೋಷಕರಿಗೆ ದಂಡ ಹಾಕಿದವರಿಗೆ ಅಧಿಕಾರಿಗಳ ಖಡಕ್ ವಾರ್ನಿಂಗ್.!

ದೇವರ ದರ್ಶನಕ್ಕೆ ಹೋಗಿದ್ದ ವೇಳೆ ದಲಿತ ಮಗುವೊಂದು ಆಕಸ್ಮಿಕವಾಗಿ ಆಂಜನೇಯ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಪೋಷಕರಿಗೆ ದಂಡ ಹಾಕಿದ ಘಟನೆ ಹನುಮಸಾಗರದ ಬಳಿ ಮಿಯಾಪುರದಲ್ಲಿ ನಡೆದಿದೆ. 

First Published Sep 21, 2021, 2:31 PM IST | Last Updated Sep 21, 2021, 2:32 PM IST

ಕೊಪ್ಪಳ (ಸೆ. 21): ದೇವರ ದರ್ಶನಕ್ಕೆ ಹೋಗಿದ್ದ ವೇಳೆ ದಲಿತ ಮಗುವೊಂದು ಆಕಸ್ಮಿಕವಾಗಿ ಆಂಜನೇಯ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಪೋಷಕರಿಗೆ ದಂಡ ಹಾಕಿದ ಘಟನೆ ಹನುಮಸಾಗರದ ಬಳಿ ಮಿಯಾಪುರದಲ್ಲಿ ನಡೆದಿದೆ. ದಂಡ ವಿದಿಸಿದವರಿಗೆ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಲಾಯಿತಲ್ಲದೇ, ಅಸ್ಪೃಶ್ಯತೆ ಆಚರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

4200 ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಾರಿಗೆ ಸಚಿವರು ಏನ್ ಹೇಳಿದ್ದಾರೆ ನೋಡಿ..!

ದಲಿತ ಮಗು ಪ್ರವೇಶದಿಂದ ದೇವಾಲಯ ಅಪವಿತ್ರವಾಗಿದ್ದು, ಹೋಮ ಹವನ ಮಾಡಿ ಸರಿಪಡಿಸಬೇಕು. ಅದಕ್ಕಾಗಿ 25 ಸಾವಿರ ದಂಡ, ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆಗುವ ವೆಚ್ಚ ನೀಡಬೇಕೆಂದು ಮಗುವಿನ ತಂದೆಗೆ ಗ್ರಾಮಸ್ಥರು ಶರತ್ತು ವಿಧಿಸಿದ್ದರು. ಇದನ್ನು ಖಂಡಿಸಿರುವ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರು.