ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರೋ ಮಹಾನ್ ಗುರುಗಳು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ
ಈ ನಾಡಿನಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಸಾಕಷ್ಟು ಮಠಗಳಿವೆ. ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ನಾಡಿನ ಹೆಸರಾಂತ ಮಠಗಳಲ್ಲಿ ಶ್ರೀ ಸಿದ್ದರಾಮೇಶ್ವರ ಮಹಾ ಸಂಸ್ಥಾನದ ಶ್ರೀ ಮಠವೂ ಒಂದು. ಈ ಮಠದ ಪೀಠಾಧ್ಯಕ್ಷರು ಶ್ರೀ ಇಮ್ಮಡಿ ಬಾಲ್ಯದಿಂದಲೂ ಶ್ರೀ ಮಠದ ಪರಂಪರೆಯನ್ನು ಪಸರಿಸುತ್ತಾ ಬಂದಿದ್ದಾರೆ.
ಈ ನಾಡಿನಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಸಾಕಷ್ಟು ಮಠಗಳಿವೆ. ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ನಾಡಿನ ಹೆಸರಾಂತ ಮಠಗಳಲ್ಲಿ ಶ್ರೀ ಸಿದ್ದರಾಮೇಶ್ವರ ಮಹಾ ಸಂಸ್ಥಾನದ ಶ್ರೀ ಮಠವೂ ಒಂದು. ಈ ಮಠದ ಪೀಠಾಧ್ಯಕ್ಷರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು. ಬಾಲ್ಯದಿಂದಲೂ ಶ್ರೀ ಮಠದ ಪರಂಪರೆಯನ್ನು ಪಸರಿಸುತ್ತಾ ಬಂದಿದ್ದಾರೆ. ಹಳ್ಳಿ ಹಳ್ಳಿಗೂ ಭೇಟಿ ನೀಡಿ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ತಮ್ಮ ಮಠದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದಾರೆ. ಜೊತೆಗೆ ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ.
ದಾವಣಗೆರೆಯಲ್ಲಿ ಆ. 1ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ ವಜ್ರಮಹೋತ್ಸವ ಹಾಗೂ ಲಿಂ. ಸಿದ್ದರಾಮೇಶ್ವರ ಶ್ರೀಗಳ 20ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮ, ಶ್ರೀಗಳ ಮಾತು ಎಲ್ಲವೂ ನಿಮ್ಮ ಮುಂದೆ.