ಡಿ.9ರಿಂದ ಚಳಿಗಾಲದ ಅಧಿವೇಶನ; ಮುಡಾ ಆರೋಪಿ ಸಿದ್ದು ಸೈಲೆಂಟಾದ್ರೆ, ಯಾರಾಗಲಿದ್ದಾರೆ ವಿಧಾನಸಭೆ ವೀರ?

ಡಿಸೆಂಬರ್ 9 ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳಿಂದಾಗಿ ಅವರು ಸೈಲೆಂಟ್ ಆಗಿರುವ ಸಾಧ್ಯತೆ ಇದೆ. ಹಾಗಾದರೆ, ಈ ಬಾರಿ ವಿಧಾನಸಭೆ ವೀರ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

First Published Nov 22, 2024, 1:46 PM IST | Last Updated Nov 22, 2024, 5:44 PM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು 2ನೇ ಚಳಿಗಾಲದ ಅಧಿವಶೇನ ಡಿಸೆಂಬರ್ 9 ರಿಂಧ ಆರಂಭವಾಗಲಿದೆ. ಪ್ರತಿಬಾರಿ ಅಧಿವೇಶನವನ್ನು ನಡುಗಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭೆಯನ್ನು ನಡುಗಿಸುತ್ತಾರೋ ಅಥವಾ ಅವರ ಮೇಲೆ ಬಂದಿರುವ ಗಂಭೀರ ಆರೋಪಗಳಿಂದ ಅಲ್ಲಿ ವಿಧಾನಸಭೆಯಲ್ಲಿಯೇ ನಡುಗುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಸಿದ್ದರಾಮಯ್ಯ ವಿಧಾನಸಭೆ ವೀರನಾಗುವುದು ಅನುಮಾನವಾಗಿದೆ. ಹಾಗದರೆ, ಈ ಬಾರಿ ವಿಧಾನಸಭೆಯನ್ನು ನಡುಗಿಸುವ ವೀರನಾರಾಗಬಹುದು ಎಂಬುದು ಕುತೂಹಲ ಮೂಡಿಸಿದೆ. ಇಲ್ಲಿದೆ ನೋಡಿ ಸ್ಪಷ್ಟ ಉತ್ತರ..

ವಿಧಾನಸಭೆಯ ವೀರ ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ಭೂತ ಕೂತಿದೆ. ವಕ್ಫ್ ಬೇತಾಳ ಹೆಗಲೇರಿದೆ. ಬಿಪಿಎಲ್ ಕಾರ್ಡ್ ರದ್ದತಿಯ ಬೆಂಕಿ ಸಿದ್ದು ಸರ್ಕಾರದ ಕೈ ಸುಡ್ತಿದೆ. ನಾಲ್ಕು ದಶಕದ ಸಿದ್ದರಾಮಯ್ಯ ರಾಜಕೀಯದಲ್ಲಿಯೇ ಅತೀ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಬೆಂಕಿಯ ಬಲೆಯಲ್ಲಿ ಸಿಲುಕಿರೋ ಸಿಎಂ, ಸದನ ಕದನದಲ್ಲಿ ಸೈಲೆಂಟ್ ಆಗಿ ಹೋಗುತ್ತಾರೆ ಎಂಬ ಸೂಚನೆ ಸಿಗುತ್ತಿವೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಒಬ್ಬರಿಗೆ ತಮ್ಮನ್ನ ತಾವು ಡಿಫೆಂಡ್  ಮಾಡಿಕೊಳ್ಳೋದು ಕಷ್ಟ. ಆಗ ಸಿದ್ದರಾಮಯ್ಯ ಅವರ ಪರವಾಗಿ ಸಮರ್ಥವಾಗಿ ನಿಲ್ಲಬಲ್ಲ ಇಬ್ಬರು ನಾಯಕರಿದ್ದಾರೆ. ಸಿದ್ದು ಪಾಲಿನ ಆ ಆಪ್ತರಕ್ಷಕರು ಯಾರು ಅಂತ ತೋರಿಸ್ತೀವಿ ನೋಡಿ..

ಕಳೆದ ಅಧಿವೇಶನದಲ್ಲಿವೂ ಮುಡಾ ವಿಚಾರ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೆ ಅಂದಿಗೂ.. ಇಂದಿಗೂ ಅಜಗಜಾಂತರವಿದೆ. ಡಿಸೆಂಬರ್ 9ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮುಡಾ ಹಗರಣವನ್ನೇ ಸಿದ್ದರಾಮಯ್ಯ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಸೋಕೆ ಕಮಲದಳ ಕೂಟ ಸಜ್ಜಾಗಿದೆ. ಆದರೆ ಕಳೆದ ಅಧಿವೇಶನದಲ್ಲಿಯೂ ಮುಡಾ ಅಸ್ತ್ರ ವಿಪಕ್ಷಗಳ ಕೈಗೆ ಸಿಕ್ಕಿತ್ತು. ಆದರೆ, ಆ ಅಸ್ತ್ರಕ್ಕೀಗ ಮತ್ತಷ್ಟು ಬಲಬಂದಿದೆ. ಅದಕ್ಕೂ ಕಾರಣವಿದೆ. ಇದೀಗ ವಿಪಕ್ಷಗಳ ನಾಯಕರಲ್ಲಿ ಒಬ್ಬರು ವಿಧಾನಸಭೆ ವೀರನಾಗುವ ಸಾಧ್ಯತೆ ಕಂಡುಬರಲಿದೆ.