ಕರ್ನಾಟಕ ಅರಣ್ಯ ಇಲಾಖೆ ಬಡವರ ಮುಂದೆ ಹುಲಿ, ಸೆಲೆಬ್ರಿಟಿ-ರಾಜಕಾರಣಿಗಳ ಮುಂದೆ ಇಲಿ!

ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಎಲ್ಲರಿಗೂ ಒಂದೇನಾ? ಹಾಗಾಗಿರಲು ಸಾಧ್ಯವೇ ಇಲ್ಲ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಬಡವರಿಗೆ ಒಂದು ನ್ಯಾಯ, ದುಡ್ಡಿದ್ದ ಹೆಸರಾಂತ ಸೆಲೆಬ್ರಿಟಿಗಳು ರಾಜಕಾರಣಿಗಳಿಗೆ ಮತ್ತೊಂದು ನ್ಯಾಯ ಅನ್ನೋದು ಹುಲಿ ಉಗುರಿನ ಪೆಂಡೆಂಟ್‌ ಕೇಸ್‌ನಲ್ಲಿ ಸಾಬೀತಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.26): ಕರ್ನಾಟಕದಲ್ಲಿ ಹುಲಿ ಉಗುರಿನ ಪೆಂಡೆಂಟ್‌ಗಳನ್ನು ಸಾಮಾನ್ಯ ನಾಗರೀಕರು, ರೈತರು ಧರಿಸುವಂತಿಲ್ಲ. ಆದರೆ, ಸೆಲೆಬ್ರಿಟಿಗಳು ರಾಜಕಾರಣಿಗಳು ಧರಿಸಬಹುದು. ಹಾಗೇನಾದರೂ ಇದಕ್ಕೆ ದೂರುಗಳು ಬಂದರೆ, ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳೇ ಪರಿಶೀಲಿಸಿ ಅದು ನಕಲಿ ಎಂದು ತೀರ್ಪು ನೀಡಿ ಬಿಡುತ್ತಾರೆ. ಆದರೆ, ಬಡವ ಧರಿಸಿದ್ದ ಪೆಂಡೆಂಟ್‌ ನಕಲಿ ಎಂದು ಹೇಳಿದರೆ, ಅದನ್ನು ಎಫ್‌ಎಫ್‌ಎಲ್‌ಗೆ ಕಳಿಸಿ ಅದು ಹುಲಿ ಉಗುರೇ ಅಲ್ಲವೇ ಎಂದು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೂ ಆತ ಜೈಲಿನಲ್ಲಿರಬೇಕು. ಇಂಥದ್ದೊಂದು ಹೊಸ ನ್ಯಾಯವನ್ನು ಕರ್ನಾಟಕದ ಅರಣ್ಯ ಇಲಾಖೆ ಪರಿಚಯಿಸಿದೆ.

ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಅದೇ ರೀತಿಯ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಕನಿಷ್ಠ 40ಕ್ಕೂ ಅಧಿಕ ಪ್ರಕರಣಗಳನ್ನು ಮಾಧ್ಯಮಗಳೇ ವರದಿ ಮಾಡಿವೆ. ಇವರೆಲ್ಲರೂ ಸೆಲೆಬ್ರಿಟಿಗಳು. ಇದು ಗೊತ್ತಾದ ಬೆನ್ನಲ್ಲಿಯೇ ಅವರ ಮೇಲೂ ಕ್ರಮ ಕೈಗೊಂಡಿದ್ದೇವೆ ಎನ್ನುವ ರೀತಿಯಲ್ಲಿ ಕೆಲ ದಾಳಿ ಮಾಡಿದ್ದಾರೆ.

ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್‌ ಒದ್ದೆ ಸೀರೆಯ ಹಾಟ್‌ ಫೋಟೋಸ್‌!

ಆದರೆ ಈ ಪೈಕಿ ಯಾರೊಬ್ಬರನ್ನೂ ಬಂಧಿಸಿಲ್ಲ. ಅದರ ಬದಲು ಸ್ವತಃ ಅರಣ್ಯ ಅಧಿಕಾರಿಗಳೇ ಅವರ ಬಳಿ ಇರುವುದು ನಕಲಿ ಪೆಂಡೆಂಟ್‌, ಇನ್ನು ಜಗ್ಗೇಶ್‌ ಅವರ ಬಳಿ ಇರುವುದು 40 ವರ್ಷದ ಹಿಂದಿನ ಪೆಂಡೆಂಟ್‌ ಎಂದು ಹೇಳುವ ಮೂಲಕ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ.

Related Video